ADVERTISEMENT

ಬಹುಸಂಖ್ಯಾತರು ಯಾರು?

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST

ಲಿಂಗಾಯತ–ವೀರಶೈವರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಸಲ್ಮಾನರು, ಕ್ರೈಸ್ತರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಈಗಾಗಲೇ ಈ ಸ್ಥಾನವನ್ನು ನೀಡಲಾಗಿದೆ. ಕುರುಬರೂ ತಮ್ಮನ್ನು ಕನಕ ಪಂಥವೆಂದು ಪರಿಗಣಿಸಬೇಕೆಂದು ಕೇಳುತ್ತಿದ್ದಾರೆ. ಉಪ್ಪಾರರೂ ತಮಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.

ಕುಂಚಟಿಗರು ಮತ್ತು ಒಕ್ಕಲಿಗರಿಂದಲೂ ಪ್ರತ್ಯೇಕತೆಯ ಕೂಗು ಕ್ಷೀಣವಾಗಿ ಕೇಳಿಬಂದಿತ್ತು. ವಿಶ್ವಕರ್ಮರು, ಬೇಡರು, ಮೊಗವೀರರು ಮುಂತಾದ ಹಲವು ಸಮುದಾಯದವರು ತಮ್ಮನ್ನು ಪ್ರತ್ಯೇಕವಾಗಿ ಪರಿಗಣಿಸಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂದು ಕೇಳುತ್ತಲೇ ಬಂದಿದ್ದಾರೆ.

ಈಗ ಒಂದು ಮುಖ್ಯವಾದ ಪ್ರಶ್ನೆ ಎದುರಾಗುತ್ತಿದೆ. ಈ ನಾಡಿನಲ್ಲಿ ಬಹುಸಂಖ್ಯಾತರಾಗಿ ಉಳಿಯುವವರು ಯಾರು?

ADVERTISEMENT

ಡಾ.ಕೆ.ಎಸ್‌. ಗಂಗಾಧರ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.