ADVERTISEMENT

ಮಾರ್ಕ್ಸ್ ಚಿಂತನೆ ಮಂಡಿತವಾದದ್ದೆಲ್ಲಿ?

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:45 IST
Last Updated 2 ಜೂನ್ 2019, 19:45 IST

ಎಸ್.ಎಲ್.ಭೈರಪ್ಪನವರು ತಮ್ಮ ಬಲಪಂಥೀಯ ಗೀಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ವಿಚಾರಗಳ ಗೊಂದಲವನ್ನು ಎಬ್ಬಿಸಿದ್ದಾರೆ (ಪ್ರ.ವಾ., ಜೂನ್‌ 1). ಪ್ರಸಕ್ತ ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ‘ಎಡಪಂಥೀಯ ಹಾಗೂ ಮಾರ್ಕ್ಸ್ ಚಿಂತನೆಗಳನ್ನು ಭಾರತೀಯರು ಈಗ ತಿರಸ್ಕರಿಸಿದ್ದಾರೆ' ಎಂದಿರುವುದು ಅವರ ಸೂಕ್ಷ್ಮದೃಷ್ಟಿಯ ಕೊರತೆಯನ್ನಷ್ಟೇ ಅಲ್ಲದೆ ಪೂರ್ವಗ್ರಹಪೀಡಿತ ಮನಸ್ಸನ್ನೂ ಎತ್ತಿ ತೋರಿಸುತ್ತದೆ. ಇಡೀ ಜಗತ್ತೇ ದಿಗ್ಭ್ರಮೆಗೊಳ್ಳುವ ಹಾಗೆ ಮಾರ್ಕ್ಸ್ ಸಂಶೋಧಿಸಿದ ಉತ್ಪಾದಕ ಶಕ್ತಿಗಳ ವೈಜ್ಞಾನಿಕ ವಿಶ್ಲೇಷಣೆಯು ಈ ಚುನಾವಣಾ ಸಮರದ ವೈಯಕ್ತಿಕ ಕೆಸರೆರಚಾಟದಲ್ಲಿ ಮಂಡಿತವಾದದ್ದಾದರೂ ಎಲ್ಲಿ, ತಿರಸ್ಕೃತವಾದದ್ದಾದರೂ ಹೇಗೆ?

ಹಾಗೊಮ್ಮೆ ಅರ್ಥ ಹುಡುಕಹೊರಟರೆ, ಮಾರ್ಕ್ಸ್ ಹೇಳಿದ ‘ನೋವಿನಿಂದ ಪಾರಾಗುವುದಕ್ಕೆ ಧರ್ಮದ ಮೊರೆ ಹೊಕ್ಕರು’, ‘ಧರ್ಮವು ಜನರ ಅಫೀಮು’ ಎಂಬ ಮಾತುಗಳಿಗೆ ಈ ಚುನಾವಣಾ ಸಂದರ್ಭ ಒಂದು ಜ್ವಲಂತ ಉದಾಹರಣೆಯಾಗಿ ನಿಂತು, ಮಾರ್ಕ್ಸ್ ಚಿಂತನೆಗಳು ಇಂದಿಗೂ ಪ್ರಸ್ತುತ ಎನಿಸುವುದಿಲ್ಲವೇ? ‘ಮಂಗಳಕರವಾದ ಚಿಂತನೆಗಳು ಎಲ್ಲ ಕಡೆಯಿಂದ ನಮಗೆ ಬರಲಿ’ ಎಂಬ ಋಗ್ವೇದದ ಸಾಲುಗಳು, ಭಾರತೀಯತೆಯನ್ನು ವ್ಯಾಖ್ಯಾನಿಸುತ್ತಿರುವುದಾದರೂ ಹೇಗೆ ಎಂದು ಶ್ರೀಯುತರು ನಮಗೆ ತಿಳಿಸಿಕೊಡಲಿ.

ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.