ADVERTISEMENT

ರಾಷ್ಟ್ರೀಯ ಹೆದ್ದಾರಿ: ಗೊಂದಲ ಪರಿಹರಿಸಿ

ಬಾಲಸುಬ್ರಹ್ಮಣ್ಯ ಕಂಜರ್ಪಣೆ
Published 11 ಮೇ 2014, 19:30 IST
Last Updated 11 ಮೇ 2014, 19:30 IST

ಕರ್ನಾಟಕದ 8 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆ­ಗೇರಿಸುವ ಹಾಗೆಯೇ ಬೆಂಗಳೂರು–ಮೈಸೂರು ಚತುಷ್ಪಥ ರಸ್ತೆಯನ್ನು ಷಟ್ಪಥ ರಸ್ತೆಯಾಗಿ ಪರಿವರ್ತಿಸುವ ಪ್ರಸ್ತಾವಕ್ಕೆ ಕೇಂದ್ರದ ಒಪ್ಪಿಗೆ ಸಿಕ್ಕಿದೆ ಎಂದು ಲೋಕೋ­­ಪ­ಯೋಗಿ ಸಚಿವರು ತಿಳಿಸಿದ್ದಾರೆ.
ಇದು ಸಂತೋಷದ ವಿಚಾರ. ಆದಷ್ಟು ಶೀಘ್ರದಲ್ಲೇ ಈ ಯೋಜನೆ ಅನುಷ್ಠಾನ­ಗೊಂಡು ಪೂರ್ಣವಾಗಲೆಂದು ಹಾರೈ­ಸೋಣ. ಈ ಪೈಕಿ ಒಂದೆರಡು ರಸ್ತೆಗಳ ಕುರಿತು  ಗೊಂದಲವಿದೆ: ಅವೆಂದರೆ–

1)ಬೆಂಗಳೂರು–ಮೈಸೂರು– ಮಡಿಕೇರಿ–ಬಂಟ್ವಾಳ (367 ಕಿ.ಮೀ.)
2)ಸಿರಗುಪ್ಪ–ಬಳ್ಳಾರಿ–ಹಿರಿಯೂರು –ಹುಳಿಯಾರ್‌–ಚಿಕ್ಕನಾಯಕನಹಳ್ಳಿ –ನಾಗ­ಮಂಗಲ–ಶ್ರೀರಂಗಪಟ್ಟಣ– ಮೈಸೂರು–ನಂಜನಗೂಡು (638 ಕಿ.ಮೀ.)

ಈ ಎರಡೂ ರಸ್ತೆಗಳಲ್ಲಿ ಬೆಂಗಳೂರು–ಮೈಸೂರು ಇಲ್ಲವೇ ಶ್ರೀರಂಗಪಟ್ಟಣ–ಮೈಸೂರು ರಸ್ತೆಗಳು ಒಳಗೊಳ್ಳು­ವುದ­ರಿಂದ ಇವುಗಳಿಗೆ ಪ್ರತ್ಯೇಕ ವೆಚ್ಚ ತೋರಿ­ಸುವುದು ಸರಿಯಾಗಲಾರದು. ಒಮ್ಮೆ ಬೆಂಗಳೂರು–ಮೈಸೂರು ರಸ್ತೆ ಷಟ್ಪಥ­ವಾ­ದೊಡನೆಯೇ  ಬೆಂಗ­ಳೂರು–ಮೈಸೂರು ಹಾಗೂ ಶ್ರೀರಂಗ­ಪಟ್ಟಣ–ಮೈಸೂರು ಭಾಗ­ಗಳು ಪ್ರತ್ಯೇಕ­ವಾಗಿ ಪರಿವರ್ತನೆ­ಗೊಳ್ಳಬೇಕಾದ ಅಥವಾ ಮೇಲ್ದರ್ಜೆಗೇ­ರ­ಬೇಕಾದ ಅಗತ್ಯ ಇರುತ್ತದೆಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.