ADVERTISEMENT

ವಿದ್ಯಾನಗರಿಗಂಟಿದ ಕಳಂಕ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 19:30 IST
Last Updated 19 ಜನವರಿ 2011, 19:30 IST

ಧಾರವಾಡದಲ್ಲಿ ಕಾಲೇಜ್ ವಿದ್ಯಾರ್ಥಿನಿಯ ನಗ್ನ ಚಿತ್ರಗಳು ಕಳೆದ ನಾಲ್ಕೈದು ತಿಂಗಳ ಹಿಂದೆ ಎಸ್‌ಎಂಎಸ್ ಮುಖಾಂತರ ಮೊಬೈಲ್‌ನಿಂದ- ಮೊಬೈಲ್‌ಗೆ ಹರಿದಾಡಿದ್ದನ್ನು, ಸಾರ್ವಜನಿಕರು ಮರೆಯುವ ಮುನ್ನವೆ, ಅದೇ ನಗರಿಯಲ್ಲಿ ಮತ್ತೊಂದು ಅಂಥದ್ದೇ ಘಟನೆ ನಡೆದಿರುವುದು ದುರದೃಷ್ಟಕರ ಸಂಗತಿ.

ತೀರಾ ಅಶ್ಲೀಲವೆನಿಸುವ ವಿದ್ಯಾರ್ಥಿನಿಯ ಭಾವ ಭಂಗಿಯ ಚಿತ್ರಗಳನ್ನು ಇತ್ತೀಚಿಗೆ ಟಿವಿ ಸುದ್ದಿವಾಹಿನಿಯೊಂದು ಪ್ರಸಾರ ಮಾಡಿದಾಗ, ಅದನ್ನು ನೋಡಿದ ಯಾವುದೇ ಹೆಣ್ಣು ಮಕ್ಕಳ ತಂದೆ-ತಾಯಿಗಳಿಗೆ ಆತಂಕ ಉಂಟಾಗದಿರದು. ವಿದ್ಯಾರ್ಥಿಗಳು ಈ ಘಟನೆಯ ಪ್ರಮುಖ ರೂವಾರಿಗಳು.

ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇದೇ ನಗರದ ಕಾಲೇಜೊಂದರ ತರಗತಿಯ ಕೋಣೆಯಲ್ಲೊಬ್ಬ ಕಳ್ಳಗುರು ತನ್ನ ಬಟ್ಟೆಯನ್ನ ಕಳಚಿ ವಿದ್ಯಾರ್ಥಿನಿಯೊಂದಿಗೆ ಮಾಡುವ ಲೈಂಗಿಕ ಚೇಷ್ಟೆಗಳನ್ನು ಟಿವಿ ವಾಹಿನಿಗಳು ಪ್ರಸಾರ ಮಾಡಿದ ಆ ಪ್ರಸಂಗವನ್ನು ನೋಡಿ ಹೇಸಿಗೆ ಹಾಗೂ ಅಸಹ್ಯವೆನಿಸಿತು. ಪಶುಗಳಂತೆ ವರ್ತಿಸುವ ನೀಚ ಗುರುಗಳನ್ನು ಕಂಡರೆ ಎಂತಹವರಿಗೂ ಸಿಟ್ಟು ಆಕ್ರೋಶ ಬಾರದಿರದು.

ಹೆಣ್ಣು ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕಳುಹಿಸಿ, ಅವರು ವಾಪಸ್ ಬರುವವರೆಗೂ ನಿರಾತಂಕವಾಗಿ ಮನೆಯಲ್ಲಿ ಇರಲಾರದ ಸ್ಥಿತಿ ಪಾಲಕರಲ್ಲಿ ಉಂಟಾಗಿರುವುದು ತೀರಾ ದುರದೃಷ್ಟಕರ ಸಂಗತಿ. ನೈತಿಕ ಮೌಲ್ಯಗಳ ಕುಸಿತದಿಂದುಂಟಾದ ಸಮಾಜದ ಫಲವಿದು.

ವಿಕೃತ ಮನಸ್ಸಿನ ಪುಂಡ ವಿದ್ಯಾರ್ಥಿಗಳನ್ನು, ಸಮಾಜದಲ್ಲಿ ಅನಪೇಕ್ಷಣಿಯ ವಾತಾವರಣವನ್ನು ನಿರ್ಮಾಣ ಮಾಡುವ ವ್ಯಕ್ತಿಗಳನ್ನು ಸೈಬರ್ ಪೊಲೀಸರು ಮಟ್ಟಹಾಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.