ADVERTISEMENT

ಶೈಕ್ಷಣಿಕ ಕೇಂದ್ರಗಳಾಗಿ ಹಾಸ್ಟೆಲ್‌ ಉಳಿಯಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಬೆಂಗಳೂರು ವಿಶ್ವವಿದ್ಯಾಲಯದ ಪಿಎಚ್‌.ಡಿ ಹಾಸ್ಟೆಲ್‌ನ ಊಟದ ಕೊಠಡಿಯಲ್ಲಿ ಫೆಬ್ರುವರಿ 26ರ ರಾತ್ರಿ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಚರ್ಚಿಸಲು ಸಭೆ ಸೇರಲಾಗಿತ್ತು. ಆಗ, ಹಾಸ್ಟೆಲ್‌ಗಳಲ್ಲಿ ಅನಧಿಕೃತವಾಗಿ ನೆಲೆಸಿದ್ದ ವ್ಯಕ್ತಿಗಳು ಅಕ್ರಮವಾಗಿ ನುಗ್ಗಿ ದಾಂದಲೆ ಎಬ್ಬಿಸಿ ಸಭೆಯಲ್ಲಿ ಮಾತನಾಡು­ತ್ತಿದ್ದ ಸಂಶೋಧನಾ ವಿದ್ಯಾರ್ಥಿಗಳ ಮೇಲೆ, ಪ್ರಧಾನ ಕ್ಷೇಮಪಾಲಕರ ಮುಂದೆಯೇ ಹಲ್ಲೆ ನಡೆಸಿ­ದರು. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದರು.

ಈ ಸಂಬಂಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ದೂರನ್ನೂ ದಾಖಲಿಸಲಾಗಿತ್ತು. ಹಲ್ಲೆಗೆ ಒಳಗಾದ ನೊಂದ ವಿದ್ಯಾರ್ಥಿಗಳು   ಕುಲಪತಿಗಳಿಗೆ ಸಾಕಷ್ಟು ಮನವಿಗಳನ್ನೂ ಸಲ್ಲಿಸಿದ್ದರು. ಇದುವರೆಗೆ ವಿ.ವಿ ಆಡಳಿತ ವರ್ಗವಾಗಲೀ ಇಲ್ಲವೆ ಪೊಲೀಸರಾಗಲೀ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಇದೊಂದು ನಾಚಿಕೆ ತರುವಂತಹ ವಿಷಯ.

ಈಗಲಾದರೂ ಘಟನೆ ಬಗ್ಗೆ ಸೂಕ್ತ ತನಿಖೆಯನ್ನು ಮಾಡಿ ಅಮಾಯಕ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಆ ಮೂಲಕ ಹಾಸ್ಟೆಲ್‌ಗಳು ಶೈಕ್ಷಣಿಕ ಕೇಂದ್ರಗಳಾಗಿಯೇ ಉಳಿಯುವಂತೆ ನೋಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.