ADVERTISEMENT

ಸಂಯಮ ಇರಲಿ

ಚೆನ್ನಾದೇವಿ ಗೋವಿಂದು, ಬೆಂಗಳೂರು
Published 23 ಮೇ 2018, 20:01 IST
Last Updated 23 ಮೇ 2018, 20:01 IST

ಮುಖ್ಯಮಂತ್ರಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ‘ರೈತರ ಸಾಲ ಮನ್ನಾ ಹಾಗೂ ಎತ್ತಿನಹೊಳೆ ವಿಚಾರದಲ್ಲಿ ಕೊಟ್ಟ ಆಶ್ವಾಸನೆ ಈಡೇರಿಸುವರೇ’ ಎಂಬ ಪ್ರಶ್ನೆ ಸವಾಲಿನ ರೂಪದಲ್ಲಿ ಕೇಳಿಬಂದಿದೆ.

ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಅವರು ಕೊಟ್ಟ ಎಲ್ಲಾ ಆಶ್ವಾಸನೆಗಳಿಗೂ ಅವರು ಬದ್ಧರಾಗಿರಬೇಕೆಂದು ಒತ್ತಾಯಿಸುವುದರಲ್ಲಿ ತಪ್ಪಿಲ್ಲ. ಆದರೆ ಇಲ್ಲಿ ಒಂದು ಸೂಕ್ಷ್ಮ ಅರಿಯಬೇಕು. ಅವರ ಪಕ್ಷವೇ ಬಹುಮತ ಪಡೆದಿದ್ದರೆ, ಬೇರೆ ಪಕ್ಷಗಳ ಹಂಗಿಲ್ಲದೆ ಸರ್ಕಾರ ರಚಿಸಲು ಸಾಧ್ಯವಾಗಿದ್ದರೆ ಆಗ ಈ ಪ್ರಶ್ನೆಗೆ ಹೆಚ್ಚು ಮನ್ನಣೆ ಸಿಗುತ್ತಿತ್ತು.

ಈಗ ಅವರದು ಸಮ್ಮಿಶ್ರ ಸರ್ಕಾರ. ಹೊಂದಾಣಿಕೆ, ರಾಜಿಮಾರ್ಗ ಅನಿವಾರ್ಯ. ಎರಡೂ ಪ್ರಮುಖ ಪಕ್ಷಗಳ ಪ್ರಣಾಳಿಕೆಗಳಲ್ಲಿನ ಕೆಲವು ಸಾಮಾನ್ಯ ಕಾರ್ಯಕ್ರಮಗಳ ಜಾರಿಗೆ ಪ್ರಯತ್ನಿಸುವುದು ಅನಿವಾರ್ಯ.

ADVERTISEMENT

ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುವುದೇ ಒಂದು ತ್ರಾಸದಾಯಕ ಕೆಲಸ. ಸಚಿವ ಸ್ಥಾನಕ್ಕೆ ಒತ್ತಡ, ಹಗ್ಗಜಗ್ಗಾಟಗಳು ಇದ್ದೇ ಇರುತ್ತವೆ. ಇಂತಹ ಒಳಗುದಿಗಳ ನಿವಾರಣೆಗಾದರೂ ಒಂದಷ್ಟು ಸಮಯ ಕೊಡಬೇಕಲ್ಲವೇ? ಮಾಧ್ಯಮಗಳು ಮತ್ತು ಸಾರ್ವಜನಿಕರು ಈ ನಿಟ್ಟಿನಲ್ಲಿ ಸಂಯಮ ತೋರಬೇಕಾದುದು ನ್ಯಾಯೋಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.