ಶಿಕ್ಷಣವಿಲ್ಲದೆ ಬದುಕು ಹಸನಾಗದು ಎಂಬ ಕಳಕಳಿಯಿಂದ ಕಾಳಿದಾಸ ವಿದ್ಯಾರ್ಥಿ ನಿಲಯ ಆರಂಭಿಸಿದ ತುಮಕೂರಿನ ಸಿರಿಯಪ್ಪ ಒಡೆಯರ್ ಒಬ್ಬ ಸಾಧಕ.ತಾನು ಹೆಚ್ಚು ಕಲಿತಿಲ್ಲವಾದರೂ, ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಭದ್ರಬುನಾದಿ ಹಾಕಿದ ಕೀರ್ತಿ ಸಿರಿಯಪ್ಪ ಒಡೆಯರ್ ಅವರದ್ದು.
ಇವರ ತತ್ವಾದರ್ಶ ಯುವ ಜನತೆಗೆ ಆದರ್ಶವಾಗಿರಲೆಂದು ತುಮಕೂರು ಜಿಲ್ಲಾಡಳಿತ ತೀರ್ಮಾನಿಸಿದೆ. ರಾಷ್ಟ್ರೀಯ ಹೆದ್ದಾರಿ 4, ಬೈಪಾಸ್ ಸೇರುವ ವೃತ್ತಕ್ಕೆ ಸಿರಿಯಪ್ಪ ಒಡೆಯರ ಅವರ ಹೆಸರನ್ನು ನಾಮಕರಣ ಮಾಡಲು ನಿರ್ಣಯಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ 9 ವರ್ಷಗಳಾಗಿದೆ. ಆದರೆ ಇದುವರೆಗೂ ಅನುಮೋದನೆ ದೊರೆತಿರುವುದಿಲ್ಲ. ಈ ಬಗ್ಗೆ ಅನುಮತಿ ಪಡೆಯಲು ಸಂಬಂಧಿಸಿದವರು ಪ್ರಯತ್ನಿಸುವರೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.