ADVERTISEMENT

ಹಣವಿದ್ದವರಿಗೆ ಟಿಕೆಟ್

ಮನೋಹರ ಬಿ.ಪೂಜಾರಿ, ಕರಕಿಹಳ್ಳಿ.
Published 16 ಏಪ್ರಿಲ್ 2013, 19:59 IST
Last Updated 16 ಏಪ್ರಿಲ್ 2013, 19:59 IST

2008ರ ಚುನಾವಣೆಗಿಂತ 2013ರ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿರುವಂತೆ ಕಾಣುತ್ತಿದೆ. 2008ರಲ್ಲಿ ಇಷ್ಟೊಂದು ಹಣದ ಹೊಳೆ ಹರಿದಿರಲಿಲ್ಲ. ಈಗ ಹೊಸ ಪಕ್ಷಗಳು ನೀರಿನಂತೆ ಹಣ ಸುರಿಯುತ್ತಿವೆ.

ಈ ಚುನಾವಣೆಯಲ್ಲಿ  ಒಬ್ಬ ರೈತನಿಗೂ ಟಿಕೆಟ್ ಕೊಡದೆ ಇರುವುದು ಅನ್ಯಾಯ. ಎಲ್ಲ ಟಿಕೆಟ್ ಇರುವುದು ಹಣವಂತರಿಗೆ ಮಾತ್ರ ಎಂದು ರಾಜಕೀಯ ಪಕ್ಷಗಳು ತೋರಿಸಿ ಕೊಟ್ಟಿವೆ. ನಿಷ್ಠಾವಂತ ಕಾರ್ಯಕರ್ತರನ್ನು ಮರೆತು ರಾಜಕೀಯ ನಾಯಕರ ಮಕ್ಕಳಿಗೆ ಟಿಕೆಟ್ ಕೊಟ್ಟಿರುವುದು ರಾಜಕೀಯ ವಿಪರ್ಯಾಸ.

ರಾಜ್ಯದಲ್ಲಿ ಶೇ 75 ರೈತರು, ಕೂಲಿ ಕಾರ್ಮಿಕರಿದ್ದಾರೆ. ವಿಪರ್ಯಾಸ ವೆಂದರೆ ಈ ಚುನಾವಣೆಯಲ್ಲಿ ಒಬ್ಬ ಕಾರ್ಮಿಕನಿಗೂ ಟಿಕೆಟ್ ನೀಡಿಲ್ಲ. ಹೀಗಾದರೆ ರೈತರ ಸಮಸ್ಯೆ ಕೇಳುವವರ‌್ಯಾರು?   
- ಮನೋಹರ ಬಿ. ಪೂಜಾರಿ, ಕರಕಿಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT