ADVERTISEMENT

ಮಾದರಿ ನಾಯಕಿಗೆ ನೀಡಬೇಕಿದೆ ನೆರವು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 19:36 IST
Last Updated 8 ಡಿಸೆಂಬರ್ 2021, 19:36 IST

ಮ್ಯಾನ್ಮಾರ್‌ನ ಪ್ರಜಾನಾಯಕಿ, ನಾಗರಿಕ ಹಕ್ಕುಗಳ ಪರ ಹೋರಾಟಗಾರ್ತಿ ಆಂಗ್ ಸಾನ್‌ ಸೂಕಿ ಅವರಿಗೆ ಅಲ್ಲಿನ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿರುವುದು ಅಚ್ಚರಿ ತರಿಸಿದೆ. ಮಾನವ ಹಕ್ಕುಗಳನ್ನು ಪ್ರತಿಪಾದಿಸುತ್ತಾ ತಮ್ಮ ಇಡೀ ಜೀವನವನ್ನು ಹೋರಾಟ, ಗೃಹಬಂಧನ, ಜೈಲು ಶಿಕ್ಷೆಯಲ್ಲೇ ಕಳೆದವರು ಸೂಕಿ. ದೇಶದ ಕಠಿಣ ಮಿಲಿಟರಿ ಆಡಳಿತದ ಶೋಷಣೆಯಿಂದ ನಾಗರಿಕರನ್ನು ಮುಕ್ತಗೊಳಿಸಲು ತಮ್ಮ ಜೀವನವನ್ನೇ ಒತ್ತೆ ಇಟ್ಟು, ಶಾಂತಿತತ್ವದ ಮಾರ್ಗದಲ್ಲಿ ಹೋರಾಡಿ ವಿಶ್ವಕ್ಕೇ ಮಾದರಿಯಾದವರು.

ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತರಾಗಿರುವ ಸೂಕಿ ಅವರಿಗೆ ಕೋವಿಡ್ ನಿಯಮ ಉಲ್ಲಂಘನೆ ಮತ್ತು ಶಾಂತಿಗೆ ಭಂಗ ಉಂಟುಮಾಡಿದ ಆರೋಪಗಳ ನೆಪವೊಡ್ಡಿ ಶಿಕ್ಷೆ ವಿಧಿಸಿರುವುದು ಯಾವ ನ್ಯಾಯ? ಅಂತರರಾಷ್ಟ್ರೀಯ ಸಮುದಾಯವು ಇಂತಹ ಮಹಾನಾಯಕಿಗೆ ಅನ್ಯಾಯವಾಗಲು ಬಿಡದೆ, ಅವರ ಮೇಲಿನ ಆರೋಪಗಳನ್ನು ಹಿಂದಕ್ಕೆ ಪಡೆಯುವಂತೆ ಮ್ಯಾನ್ಮಾರ್‌ನ ಮಿಲಿಟರಿ ಆಡಳಿತದ ಮೇಲೆ ಒತ್ತಡ ಹೇರಬೇಕಾಗಿದೆ.

- ಆರ್.ಬಿ.ಜಿ.ಘಂಟಿ, ಅಮೀನಗಡ, ಬಾಗಲಕೋಟೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.