ADVERTISEMENT

ಸನಾತನ ಎಂದರೆ...

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 10 ಜನವರಿ 2021, 19:30 IST
Last Updated 10 ಜನವರಿ 2021, 19:30 IST

‘ಅನುಭವ ಮಂಟಪ’ ನಿರ್ಮಾಣಕ್ಕೆ ಭೂಮಿಪೂಜೆ ಸಂದರ್ಭದಲ್ಲಿ ಪ್ರಕಟವಾದ ‘ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ’ ಎಂಬ ಶೀರ್ಷಿಕೆಯ ಬಗ್ಗೆ ಕೆಲವು ಗೊಂದಲದ ವ್ಯಾಖ್ಯಾನಗಳು ಕೇಳಿಬಂದಿವೆ. ಮೊದಲನೆಯದಾಗಿ, ಸನಾತನ ಎಂಬ ಪದ ಸಂಸ್ಕೃತ ಮೂಲದ್ದು. ಸನಾತನ ಎಂದರೆ ಸದಾಕಾಲ ಇರುವಂತಹುದು, ಸರ್ವಕಾಲಕ್ಕೂ ಒಪ್ಪುವಂತಹುದು. ಅವ್ಯಯವಾಗದೆ, ಮಿತಿ ಇಲ್ಲದೆ, ದೀರ್ಘಕಾಲದವರೆಗೆ ಶಾಶ್ವತವಾಗಿ ಉಳಿಯುವ ಸೂರ್ಯ, ಚಂದ್ರ, ನಕ್ಷತ್ರ, ಪ್ರಕೃತಿ, ಪಂಚಭೂತಗಳು, ಪ್ರಾಣಿ, ಪಕ್ಷಿ, ಕ್ರಿಮಿಕೀಟಗಳು ಸನಾತನ. ಇಂತಹ ಸನಾತನ ವಿಶ್ವವ್ಯವಸ್ಥೆ ಮತ್ತು ಜೈವಿಕ ವ್ಯವಸ್ಥೆಯನ್ನು ಗೌರವಿಸಿ ಪೂಜಿಸುವುದು ಸನಾತನ ಸಂಸ್ಕೃತಿ.

ಅದೇ ರೀತಿ ಪ್ರಗತಿಪರ ಚಿಂತನೆ, ಅಭಿವೃದ್ಧಿ, ವಿಕಾಸ ಮುಂತಾದವು ಕೂಡ ಸನಾತನ. ಅದಕ್ಕೆ ಪೂರಕವಾಗಿ ಬಸವಣ್ಣನವರ ಪ್ರಗತಿಪರ ಚಿಂತನೆ, ವಚನಗಳು ಮತ್ತು ಅನುಭವ ಮಂಟಪವು ಕೂಡ ಸನಾತನ. ಅನುಭವ ಮಂಟಪದ ಮರುಸೃಷ್ಟಿಯು ಸಮಾಜದ ಒಂದು ದೊಡ್ಡ ಮೈಲಿಗಲ್ಲು. ಆದ್ದರಿಂದ ಆ ಶೀರ್ಷಿಕೆ ಸರಿಯಾಗಿಯೇ ಇದೆ. ಹಿಂದೂ ಧರ್ಮದ ಕೆಲವು ನಂಬಿಕೆ ಮತ್ತು ಆಚರಣೆಗಳನ್ನು ತಿರಸ್ಕರಿಸುವ ಭರದಲ್ಲಿ ಸನಾತನ ಎಂಬ ಪದವನ್ನು ಅಪಾರ್ಥ ಮಾಡಿಕೊಳ್ಳಬಾರದು. ಭೂಮಿಪೂಜೆ ಕೂಡ ಸನಾತನ ಸಂಸ್ಕೃತಿಯ ಒಂದು ಆಚರಣೆ.

– ಬಿ.ಎನ್.ಸುರೇಶ್ವರ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.