ADVERTISEMENT

ಬಿಬಿಎಂಪಿ ಕಾರ್ಯವೈಖರಿಗೆ ದಿಕ್ಸೂಚಿ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 3 ಏಪ್ರಿಲ್ 2022, 19:31 IST
Last Updated 3 ಏಪ್ರಿಲ್ 2022, 19:31 IST

ಬಿಬಿಎಂಪಿ ‘ಗುಪ್ತ’ ಬಜೆಟ್ ಸುದ್ದಿ (ಪ್ರ.ವಾ., ಏ. 1) ಓದಿ ಒಂದು ರೀತಿಯ ಅಸಹಾಯಕತೆ ಆವರಿಸಿತು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಯಾವುದೂ ಸುಸೂತ್ರವಿಲ್ಲ. ಯಾರ ನಿಯಂತ್ರಣವೂ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಸ್ತುವಾರಿಯೂ ಹೆಸರಿಗಷ್ಟೇ. ಸಮಸ್ಯೆಗಳ ಸರಮಾಲೆಯನ್ನೇ ಹೊತ್ತ ಬೆಂಗಳೂರನ್ನು ಸಮರ್ಥವಾಗಿ ಮುನ್ನಡೆಸಬೇಕಾದ ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್‌ ಅಸ್ತಿತ್ವದಲ್ಲಿ ಇಲ್ಲದಿರುವುದು ಅಧಿಕಾರಿಗಳಿಗೆ ವರದಾನವಾಗಿ ಪರಿಣಮಿಸಿದೆ.

ರಾಜ್ಯ ಸರ್ಕಾರವು ಬಿಬಿಎಂಪಿಯ ಬಜೆಟ್ ಅನ್ನು ಕಾಟಾಚಾರಕ್ಕೆ ಎಂಬಂತೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಅನುಮತಿಸಿರುವುದು ಮುಂದಿನ ಒಂದು ವರ್ಷದ ಬಿಬಿಎಂಪಿಯ ಕಾರ್ಯವೈಖರಿಯ ದಿಕ್ಸೂಚಿಯಂತಿದೆ! ವಿವರಣೆಯೇ ಇಲ್ಲದ ಮೊದಲ ಸವ್ಯಸಾಚಿ ಬಜೆಟ್ ಬಹುಶಃ ಇದಾಗಿರಬೇಕು. ಬೇಲಿಗೆ ಓತಿಕ್ಯಾತ ಸಾಕ್ಷಿ ಎಂಬಂತೆ, ವ್ಯವಸ್ಥೆಗಳೆಲ್ಲ ದುಃಸ್ಥಿತಿಗೆ ತಲುಪಿ, ಸುಧಾರಣೆಗಳೆಲ್ಲ ಗೌಣವಾಗಿ ಲೂಟಿಯೇ ಮೇಲುಗೈ ಪಡೆಯುತ್ತಿದೆ.

- ರಿಪ್ಪನ್‌ಪೇಟೆ ನಟರಾಜ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.