ADVERTISEMENT

ವಾಚಕರ ವಾಣಿ: ಎಚ್ಚರ ಇರಲಿ, ಅಸಡ್ಡೆ ಬೇಡ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 19:30 IST
Last Updated 24 ಸೆಪ್ಟೆಂಬರ್ 2020, 19:30 IST

ಕೇಂದ್ರ ಸಚಿವ ಸುರೇಶ್ ಅಂಗಡಿಯವರು ಕೋವಿಡ್‌ನಿಂದಾಗಿ ನಿಧನರಾಗಿದ್ದು ಆತಂಕಕಾರಿ ಸಂಗತಿ. ಕೇಂದ್ರ ಸಚಿವರಾಗಿದ್ದೂ ದೇಶದ ಪ್ರತಿಷ್ಠಿತ ‘ಏಮ್ಸ್’ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಅವರು ಗುಣಮುಖರಾಗಲಿಲ್ಲ. ಈ ವಿಚಾರವನ್ನು ಜನಸಾಮಾನ್ಯರು ಗಂಭೀರವಾಗಿ ಪರಿಗಣಿಸಬೇಕು. ಜನರಲ್ಲಿ ಇತ್ತೀಚೆಗೆ ಕೊರೊನಾ ವೈರಾಣು‌ ಬಗ್ಗೆ ಭಯ ಇಲ್ಲದಂತಾಗಿದೆ. ಎಲ್ಲಾ ಕಡೆ ನಿರ್ಭೀತಿಯಿಂದ ಓಡಾಡುವ ದೃಶ್ಯ ಕಾಣಸಿಗುತ್ತದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿಲ್ಲ. ಸರ್ಕಾರ ಕೂಡಾ ಈ ವಿಚಾರದಲ್ಲಿ ಕೈ ಚೆಲ್ಲಿದಂತೆ ಕಾಣುತ್ತಿದೆ. ಇಂತಹ ಅಸಡ್ಡೆ ಒಳ್ಳೆಯದಲ್ಲ. ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು ಅಗತ್ಯ ಎಂಬುದನ್ನು ಅರಿಯಬೇಕು. ಸೋಂಕಿಗೆ ಒಳಗಾಗದಂತೆ ಎಚ್ಚರ ವಹಿಸುವುದೇ ಜಾಣ ನಡೆ ಎಂಬುದನ್ನು ಸರ್ಕಾರ ಪದೇ ಪದೇ ಮನದಟ್ಟು ಮಾಡಿಸುತ್ತಲೇ ಇರಬೇಕು.

–ವಿ.ತಿಪ್ಪೇಸ್ವಾಮಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT