ADVERTISEMENT

ಜಿಲ್ಲಾಧಿಕಾರಿಗೆ ಹೊಡೆಯುವ ಹಕ್ಕಿಲ್ಲ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 20:16 IST
Last Updated 23 ಜನವರಿ 2020, 20:16 IST

ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ಕಂದಾಯ ಅಧಿಕಾರಿಗೆ ಕಪಾಳಮೋಕ್ಷ ಮಾಡಿ ಸುದ್ದಿಯಾಗಿದ್ದಾರೆ.

ಜಿಲ್ಲಾಧಿಕಾರಿ ತನ್ನ ಅಧೀನ ನೌಕರನಿಗೆ ಕಪಾಳಮೋಕ್ಷ ಮಾಡಲು ಯಾವುದೇ ಅಧಿಕಾರ ಇರುವುದಿಲ್ಲ. ಕಂದಾಯ ಅಧಿಕಾರಿಯು ತನ್ನ ಕರ್ತವ್ಯದಲ್ಲಿ ತಪ್ಪೆಸಗಿದ್ದರೆ, ಲೋಪವುಂಟು ಮಾಡಿದ್ದರೆ ಆತನನ್ನು ಸೇವೆಯಿಂದ ಅಮಾನತು ಮಾಡಲಿ ಅಥವಾ ಇನ್ಯಾವುದೇ ಶಿಸ್ತು ಕ್ರಮ ಜರುಗಿಸಲಿ. ಅವರಿಗೆ ಈ ಬಗೆಯ ಅಧಿಕಾರವಿದೆ. ಅದು ಬಿಟ್ಟು, ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡುವುದು ಎಷ್ಟು ಸರಿ?

ಆರೋಪಿಗಳನ್ನು ಹೊಡೆಯಲು ಪೊಲೀಸರಿಗೇ ಅವಕಾಶವಿಲ್ಲ. ವಿದ್ಯಾರ್ಥಿಗಳಿಗೆ ಶಿಕ್ಷಕರು ದೈಹಿಕ ಶಿಕ್ಷೆ ನೀಡದೆ ಬುದ್ಧಿಮಾತಲ್ಲೇ ಪಾಠ ಕಲಿಸಬೇಕೆಂದು ನಿರೀಕ್ಷಿಸಲಾಗುತ್ತದೆ. ಅಂತಹುದರಲ್ಲಿ ಜಿಲ್ಲಾಧಿಕಾರಿಯೊಬ್ಬರು ತಮ್ಮ ಅಧೀನ ನೌಕರನಿಗೆ ಕಪಾಳಮೋಕ್ಷ ಮಾಡಿದ್ದು ಅಪರಾಧ.

ADVERTISEMENT

-ಲಕ್ಷ್ಮೀಕಾಂತರಾಜು ಎಂ.ಜಿ.,ಮಠಗ್ರಾಮ, ಗುಬ್ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.