ADVERTISEMENT

ಸ್ವಚ್ಛತೆ ಸಾಬೀತಿಗೆ ಸುವರ್ಣಾವಕಾಶ

​ಪ್ರಜಾವಾಣಿ ವಾರ್ತೆ
Published 1 ಮೇ 2020, 20:00 IST
Last Updated 1 ಮೇ 2020, 20:00 IST

ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ಮತ್ತು ಮಾಸ್ಕ್‌ ಧರಿಸದಿದ್ದರೆ ದಂಡ ವಿಧಿಸುವ ಸರ್ಕಾರದ ನಿರ್ಧಾರ ಅಭಿನಂದನಾರ್ಹ. ವಿದೇಶಗಳಲ್ಲಿರುವ ಅಚ್ಚುಕಟ್ಟುತನ, ಸಾರಿಗೆ ನಿಯಮ ಪಾಲನೆ ಇತ್ಯಾದಿಗಳನ್ನು ತಿಳಿದಾಗ ನಾವು ಅಲ್ಲಿಯ ಪ್ರಜೆಗಳನ್ನು ಪ್ರಶಂಸಿಸುತ್ತೇವೆ. ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ನಾವು ಸಹ ಮನೆಗಳಿಂದ ಹೊರಬರದೆ ನಮ್ಮ ನಮ್ಮ ಮನೆಯ ಬೀದಿ, ಗಲ್ಲಿ, ರಸ್ತೆಗಳಲ್ಲಿ ಎಲ್ಲೂ ಉಗುಳದೆ, ಸ್ವಚ್ಛಂದವಾದ ಪರಿಸರದಲ್ಲಿ ವಾಸಿಸುತ್ತಿದ್ದೇವೆ.

ಇನ್ನು ಮುಂದೆ ಸಹ ನಾವು ಯಾವ ದೇಶಕ್ಕೂ ಕಮ್ಮಿಯಿಲ್ಲದಂತೆ ಇರಬಲ್ಲೆವು ಎಂಬುದನ್ನು ಸಾಬೀತುಪಡಿಸಲು ಇದೊಂದು ಸುವರ್ಣಾವಕಾಶ. ಮುಂದೆ ಲಾಕ್‌ಡೌನ್‌ ಇರಲಿ ಬಿಡಲಿ, ಸಾಮಾನ್ಯ ದಿನಗಳಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳದೇ ಇರುವಂತಹ ಕಾಯ್ದೆಯನ್ನು ಜಾರಿಗೆ ತರಬೇಕು.

-ನಾಗೋಜಿರಾವ್, ಹೊಸಮನೆ, ಭದ್ರಾವತಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.