ADVERTISEMENT

ಸರ್ಕಾರಕ್ಕೆ ಕೈಕೊಡುವುದು ಧರ್ಮವಲ್ಲ

ಪ್ರೊ.ಶಿವರಾಮಯ್/ಬೆಂಗಳೂರು
Published 28 ಜೂನ್ 2018, 19:58 IST
Last Updated 28 ಜೂನ್ 2018, 19:58 IST

ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಧರ್ಮಸ್ಥಳ ಬಳಿಯ ಶಾಂತಿವನದಿಂದಲೇ ‘ಅಶಾಂತಿ ಪರ್ವ’ಕ್ಕೆ ನಾಂದಿಯಾಗುವ ಮಾತುಗಳನ್ನು ಆಡಿರುವುದು ವಿಪರ್ಯಾಸ.

ಸರ್ಕಾರ ರಚನೆಗೆ ಬೇಕಾಗುವಷ್ಟು ಬಹುಮತ ತಮಗೆ ದೊರೆಯದಿದ್ದಾಗ, ದೇವೇಗೌಡರ ಮನೆಯವರೆಗೂ ಹೋಗಿ ಜೆಡಿಎಸ್‌ಗೆ ಬೇಷರತ್ ಬೆಂಬಲ ಸೂಚಿಸಿದವರು ಇವರೇ ಅಲ್ಲವೇ? ತಮ್ಮ ಆಳ್ವಿಕೆಯಲ್ಲಿ ಜನಪರವಾದ ಎಷ್ಟೇ ಯೋಜನೆಗಳನ್ನು ರೂಪಿಸಿದ್ದರೂ ಅವು ಬಹುಮತ ಪಡೆಯಲು ಸಾಕಾಗಲಿಲ್ಲವಲ್ಲ? ಅವರ ಲೆಕ್ಕಾಚಾರ ಎಲ್ಲಿಯೊ ತಪ್ಪಿ ಹೋಯಿತು, ಆ ಮಾತಿರಲಿ.

ಈಗ ಬಜೆಟ್‌ ಮಂಡನೆಯ ವಿಚಾರವಾಗಿ ಅವರು ಆಕ್ಷೇಪ ಎತ್ತುವ ಬದಲು ಮೌನ ಧರಿಸುವುದು ಉತ್ತಮ. ಇಲ್ಲವಾದರೆ ಸರ್ಕಾರ ಮೂರಾಬಟ್ಟೆಯಾಗಿ ಜಮ್ಮು ಕಾಶ್ಮೀರದ ಗತಿ ಆದೀತು. ಅಂದು ‘ಕೈಕಟ್ಟಿ ನಿಂತವರು ಇಂದು ಕೈಕೊಡುವುದು’ ಧರ್ಮವಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.