ADVERTISEMENT

ವಾಚಕರ ವಾಣಿ | ಸ್ತಬ್ಧಚಿತ್ರ ಆಯ್ಕೆ: ಎಲ್ಲರಿಗೂ ಸಿಗಲಿ ಅವಕಾಶ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 19:30 IST
Last Updated 8 ಜನವರಿ 2023, 19:30 IST

ರಾಜ್ಯದಿಂದ ಸ್ತಬ್ಧಚಿತ್ರವು ಸತತವಾಗಿ 13 ವರ್ಷಗಳಿಂದ ದೆಹಲಿಯ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ, ಕನ್ನಡ ಮಣ್ಣಿನ ಕಂಪನ್ನು ದೇಶದೆಲ್ಲೆಡೆ ಪಸರಿಸುತ್ತಿತ್ತು. ಆದರೆ ಈ ವರ್ಷದ ಗಣರಾಜ್ಯೋತ್ಸವದಲ್ಲಿ ಸಿರಿಧಾನ್ಯಗಳ ಬಗ್ಗೆ ಮಾಡಲಾಗಿದ್ದ ಕರ್ನಾಟಕದ ಸ್ತಬ್ಧಚಿತ್ರವು ಆಯ್ಕೆಯ ಕೊನೆಯ ಸುತ್ತಿನಲ್ಲಿ ಸೋತಿರುವುದು ಬೇಸರದ ಸಂಗತಿ.

ಹೋದ ವರ್ಷ ಕರ್ನಾಟಕದ ಕರಕುಶಲ ವಸ್ತುಗಳ ಸೊಗಡಿನ ಸ್ತಬ್ಧಚಿತ್ರ ಎರಡನೇ ಬಹುಮಾನ ಪಡೆದಿತ್ತು ಎಂಬುದು ನಮ್ಮ ಹೆಮ್ಮೆಯ ಸಂಗತಿ. ರೋಸ್ಟರ್ ಪದ್ಧತಿ ಮೂಲಕ ಆಯ್ಕೆ ಮಾಡುತ್ತಿರುವುದರಿಂದ ಎಲ್ಲಾ ರಾಜ್ಯಗಳ ಸ್ತಬ್ಧಚಿತ್ರಗಳಿಗೆ ಅವಕಾಶ ಸಿಗುತ್ತಿಲ್ಲ. ಈ ಪದ್ಧತಿ ಬಿಟ್ಟು ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೂ ಅವಕಾಶ ನೀಡಬೇಕು. ಅಂದಾಗ ಸಮಗ್ರತೆ, ಒಕ್ಕೂಟ ವ್ಯವಸ್ಥೆಗೆ ಮತ್ತಷ್ಟು ಕಳೆ ಬರಲಿದೆ.

-ಬಸನಗೌಡ ಪಾಟೀಲ, ಯರಗುಪ್ಪಿ, ಧಾರವಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.