ADVERTISEMENT

ಅತೃಪ್ತಿ ಹರಳುಗಟ್ಟದಿರಲಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 19:45 IST
Last Updated 30 ಮಾರ್ಚ್ 2020, 19:45 IST

ಜನ ಒಂದೆಡೆ ವೈರಾಣು ಸೋಂಕಿನ ಭೀತಿಯಲ್ಲಿ ನರಳುತ್ತಿದ್ದರೆ, ಇನ್ನೊಂದೆಡೆ ಕೆಲವು ಪೊಲೀಸರ ಹದ್ದು ಮೀರಿದ ವರ್ತನೆಯನ್ನು ಗಮನಿಸುತ್ತಿದ್ದಾರೆ. ಇದು, ಜನರಲ್ಲಿ ಸಿಟ್ಟು, ಸಿಡಿಮಿಡಿಯನ್ನು ಹರಳುಗಟ್ಟಿಸುತ್ತದೆ. ಇದನ್ನು ಲೆಕ್ಕಿಸದೆ, ಪೊಲೀಸರು ಇದೇ ರೀತಿ ನಡೆದುಕೊಂಡರೆ, ಅದು ಆಕ್ರೋಶವಾಗಿ ಸಿಡಿಯಬಹುದು.

ಜನಸಮೂಹವನ್ನು ನಿರ್ವಹಿಸುವುದರಲ್ಲಿ ಅನುಭವ ಇರುವ ಹಿರಿಯರಿಗೆ ಇದು ಅರ್ಥವಾಗುತ್ತದೆ. ಅವರಾದರೂ ತಕ್ಷಣ ಪೊಲೀಸರಿಗೆ ಬುದ್ಧಿ ಹೇಳಬೇಕು. ಸಂಯಮದಿಂದ ನಡೆದುಕೊಳ್ಳುವಂತೆ ತಿಳಿಹೇಳಬೇಕು. ಲಾಕ್‌ಡೌನ್‌ನಲ್ಲಿ ಅತಿ ಹೆಚ್ಚು ತ್ಯಾಗ ಮಾಡುತ್ತಿರುವವರು ದಿನದ ದುಡಿಮೆಯನ್ನು ನಂಬಿ ಬದುಕುತ್ತಿರುವ ಕೋಟ್ಯಂತರ ಜನ ಎಂಬುದನ್ನು ಪೊಲೀಸರು ತಿಳಿಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಾನವ ಹಕ್ಕುಗಳ ಮೇಲಿನ ಈ ದಾಳಿಯನ್ನು ಹೈಕೋರ್ಟ್‌ ಗಮನಿಸಿ, ಸೂಕ್ತ ನಿರ್ದೇಶನ ನೀಡಬೇಕು.

-ಟಿ.ಯಶವಂತ, ತೊರೆಶೆಟ್ಟಹಳ್ಳಿ, ಮದ್ದೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.