ADVERTISEMENT

ಸಾಕುನಾಯಿ: ತ್ಯಾಜ್ಯ ವಿಲೇವಾರಿ ಸೌಲಭ್ಯ ಬೇಕು

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 20:30 IST
Last Updated 1 ಜುಲೈ 2022, 20:30 IST

ಬೆಂಗಳೂರಿನ ಕಬ್ಬನ್‌ಪಾರ್ಕ್‌ಗೆ ಸಾಕುನಾಯಿಗಳನ್ನು ಕರೆದುಕೊಂಡು ಬರುವುದನ್ನು ನಿಷೇಧಿಸಿರುವುದಾಗಿ ಹೇಳುವ ಫಲಕಗಳನ್ನು ಹಾಕುವುದರಿಂದ ಹೆಚ್ಚಿನ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ. ಬದಲಿಗೆ, ಮಾಲೀಕರು ನಾಯಿಯ ಜೊತೆಯಲ್ಲಿ ಹೊರಗೆ ಬರುವಾಗ ತ್ಯಾಜ್ಯ ಸಂಗ್ರಹಣೆ ಕಂಟೇನರ್‌ ತರುವುದನ್ನು ಕಡ್ಡಾಯ ಮಾಡಿ. ಅದರಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ನಿಗದಿತ ಸ್ಥಳದಲ್ಲಿನ ದೊಡ್ಡ ಕಂಟೇನರ್‌ನಲ್ಲಿ ಹಾಕುವಂತೆ ನಿಯಮ ರೂಪಿಸಬೇಕು. ಹೀಗೆ ಕಂಟೇನರ್‌ನಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಅತಿ ಹೆಚ್ಚಿನ ಉಷ್ಣತೆಯಲ್ಲಿ ದಹಿಸುವಂತೆ ಮಾಡಬಹುದು. ಇದು ವೈಜ್ಞಾನಿಕ ವಿಧಾನವಾಗಿದ್ದು ಇದರಿಂದ ಸೂಕ್ಷ್ಮ ಜೀವಿಗಳು ನಾಶವಾಗುತ್ತವೆ ಹಾಗೂ ಪರಿಸರ ಚೊಕ್ಕವಾಗಿರುತ್ತದೆ.

ಸಾಕುನಾಯಿಗಳನ್ನು ಪಾರ್ಕಿನ ಒಳಗೆ ಕರೆದುಕೊಂಡು ಬರುವುದನ್ನು ನಿಷೇಧ ಮಾಡಿದರೆ ಪಾರ್ಕಿನ ಹೊರಗೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳು ತ್ಯಾಜ್ಯ ಉಂಟು ಮಾಡುತ್ತವೆ ಅಲ್ಲವೇ? ನಾಯಿ ಮಾಲೀಕರು ಅದನ್ನು ಸ್ವಚ್ಛಗೊಳಿಸಿದರೂ, ಸ್ವಚ್ಛಗೊಳಿಸಿದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಇಲ್ಲ. ಹೀಗಾಗಿ ವೈಜ್ಞಾನಿಕವಾದ ಬಗೆಯಲ್ಲಿ ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಕುರಿತು ಅರಿವು ಮೂಡಿಸುವ ಕೆಲಸಗಳಿಗೆ ಆದ್ಯತೆ ಕೊಡಬೇಕು.ಈ ದಿಸೆಯಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚಿಂತನೆ ಮಾಡಲಿ.

-ಡಾ.ಜಿ. ಬೈರೇಗೌಡ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.