ADVERTISEMENT

ದೇವೇಗೌಡ–ಸಿದ್ದರಾಮಯ್ಯ: ಗುರು– ಶಿಷ್ಯರ ಆಟ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 20:01 IST
Last Updated 25 ಅಕ್ಟೋಬರ್ 2018, 20:01 IST

ತಾನಿರುವಾಗಲೇ ಮನೆಮಂದಿಯನ್ನೆಲ್ಲ ಅಧಿಕಾರಕ್ಕೆ ತರಬೇಕೆಂಬುದೇ ದೊಡ್ಡ ಗೌಡರ ಏಕೈಕ ಗುರಿ ಇದ್ದಂತಿದೆ. ಈ ನಾಡಿನ ಜನರನ್ನಾಳಲು ಮನೆ ಮಂದಿಯೇ ಸಾಕೆನ್ನುವಂತಾಗಿದೆ. ಒಂದು ರೈತ ಕುಟುಂಬದ ಇಷ್ಟೂ ಜನ ರಾಜಕೀಯದಲ್ಲೇ ಇದ್ದರೆ ನೇಗಿಲು ಹಿಡಿಯುವವರಾರು? ರೈತ ಇದನ್ನು ಅರ್ಥಮಾಡಿಕೊಳ್ಳದಿರಲಾರ. ಇವರು ರೈತ ಮಕ್ಕಳಾಗಲು ಹೇಗೆ ಸಾಧ್ಯ? ರೈತ ಸಂಘದ ಗೌರವಾಧ್ಯಕ್ಷರು ಹೇಳಿರುವಂತೆ, ‘ರಾಜಕಾರಣಿಗಳು ಭಾಷಣಗಳಲ್ಲಿ ರೈತರ ಪರವಾಗಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ರೈತರ ಪರವಾಗಿ ಯೋಚಿಸುವ ಯಾವೊಬ್ಬ ರಾಜಕಾರಣಿಯೂ ಇಲ್ಲ’ ಎಂಬುದು ಸತ್ಯ.

ಒಂದೇ ವೇದಿಕೆಯನ್ನು ಹಂಚಿಕೊಂಡ ಬದ್ಧ ವೈರಿಗಳು ಗುರು–ಶಿಷ್ಯರಾಗಲು ಸಾಧ್ಯವೇ? ಇದರಲ್ಲಿ ಗುರು ಯಾರು, ಶಿಷ್ಯ ಯಾರು? ‘ಈ ಹಿಂದೆ ಸಾಕಷ್ಟು ತಪ್ಪುಗಳನ್ನು ಮಾಡಿದ್ದೇವೆ. ಪರಸ್ಪರ ಹೋರಾಡಿದ್ದೇವೆ. ರಾಜ್ಯದ ಜನ ಮನ್ನಿಸಬೇಕು’ ಎಂದು ಗೌಡರು ಅಂಗಲಾಚುವುದನ್ನು ಸ್ವತಃ ಸಿದ್ದರಾಮಯ್ಯನವರೇ ನಂಬಲಾರರು. ‘ನಮ್ಮಪ್ಪನಾಣೆ ಜೆಡಿಎಸ್ ಅಧಿಕಾರಕ್ಕೆ ಬರೋಲ್ಲ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋಲ್ಲ...’ ಎಂದು ಹೇಳಿ ನೂರೊಂದು ಭಾಗ್ಯಗಳನ್ನು ಕಲ್ಪಿಸಿದರೂ ಮೂಲೆಗುಂಪಾದ ಸಿದ್ದರಾಮಯ್ಯ ಅವರಿಗೆ ಗೌಡರ ಚದುರಂಗದಾಟ ಅರ್ಥವಾಗದೆ ಇರಲಾರದು. ರಾಜ್ಯದ ರಾಜಕೀಯ ಪರಿಸ್ಥಿತಿಯೂ ಹಾಗೇ ಇದೆ. ಕಾರ್ಯವಾಸಿ ಕತ್ತೆ ಕಾಲು ಕಟ್ಟು ಎನ್ನುವಂತಾಗಿದೆ. ತಮ್ಮ ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ಎರಡೂ ಪಕ್ಷಗಳಿಗೆ ಇಲ್ಲ. ಅಂಗಲಾಚಿ ಎಷ್ಟೇ ಗುಂಪುಗಳು ಒಂದಾದರೂ ದೇಶಪ್ರೇಮಿ ‘ಚಾಯ್‌ವಾಲ’ ನನ್ನು ಮತದಾರ ಕೈ ಬಿಡಲಾರ ಎಂಬುದಂತೂ ಸತ್ಯ.

–ಯಮಲೂರು ಎಂ. ವೆಂಕಟಪ್ಪ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.