ADVERTISEMENT

ಧಮ್ಕಿ ಹಾಕುವುದು ಬೇಡ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2018, 20:01 IST
Last Updated 10 ಅಕ್ಟೋಬರ್ 2018, 20:01 IST

ರೈತರು ಅನ್ನದಾತರು ನಿಜ. ಅವರ ಕಷ್ಟ–ನಷ್ಟಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಅಂದಹಾಗೆ ಬ್ಯಾಂಕಿನ ಅಧಿಕಾರಿ ವರ್ಗ ಹಾಗೂ ನೌಕರ ವರ್ಗದಲ್ಲೂ ರೈತ ಕುಟುಂಬದವರಿದ್ದಾರೆ. ಅವರಿಗೂ ರೈತರ ಬಗ್ಗೆ ಕಾಳಜಿ ಇದೆ. ಇಂತಹ ಸಂದರ್ಭದಲ್ಲಿ, ‘...ಬ್ಯಾಂಕಿನ ಅಧಿಕಾರಿಗಳನ್ನು ಜೈಲಿಗೆ ಕಳಿಸುತ್ತೇನೆ’ ಎಂಬ ಮುಖ್ಯಮಂತ್ರಿ ಹೇಳಿಕೆ ಅವರ ಸ್ಥಾನಕ್ಕೆ ಶೋಭೆ ತರುವಂತಹುದಲ್ಲ. ಇದೊಂದು ನಗೆಪಾಟಲು ಧಮ್ಕಿ.

ಏಕೆಂದರೆ ಬ್ಯಾಂಕಿನ ಒಬ್ಬ ಮಾಮೂಲಿ ಜವಾನ ಕೂಡ ಮುಖ್ಯಮಂತ್ರಿ ಅಧೀನಕ್ಕೆ ಒಳಪಡುವುದಿಲ್ಲ. ಬದಲಾಗಿ ಅವರಿಗೆ ಡಿ.ಜಿ.ಎಂ., ಜಿ.ಎಂ., ಎಂ.ಡಿ. ಇದ್ದಾರೆ. ಇವರೆಲ್ಲಾ ಆರ್.ಬಿ.ಐ. ಅಧೀನಕ್ಕೆ ಒಳಪಡುತ್ತಾರೆ. ಮುಖ್ಯಮಂತ್ರಿಯವರು ಧಮ್ಕಿ ಹಾಕುವ ಬದಲು ಎಲ್ಲಾ ಬ್ಯಾಂಕುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಲ ಮನ್ನಾ ಕೆಲಸ ಸುಗಮವಾಗಿ ಆಗುವಂತೆ ಮಾಡುವುದು ಒಳ್ಳೆಯದು.

ಎನ್. ಮೂರ್ತಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.