ADVERTISEMENT

ಹಜ್‌ ಭವನಕ್ಕೆ ಟಿಪ್ಪು ಹೆಸರು ಬೇಡ

ಬಿ.ಮೊಹಿದ್ದೀನ್ ಖಾನ್, ಚಿತ್ರದುರ್ಗ
Published 28 ಜೂನ್ 2018, 16:56 IST
Last Updated 28 ಜೂನ್ 2018, 16:56 IST

ಹಜ್ ಭವನದ ಹೆಸರನ್ನು ‘ಟಿಪ್ಪು ಸುಲ್ತಾನ್ ಹಜ್‌ಘರ್’ಎಂದು ಬದಲಿಸಲು ವಕ್ಫ್ ಸಚಿವರಾದ ಜಮೀರ್ ಅಹ್ಮದ್‌ ಖಾನ್‌ ಅವರು ಇಂಗಿತ ವ್ಯಕ್ತಪಡಿಸಿದ್ದಾರೆ, ಇದು ಸರಿಯಲ್ಲ.

ಕಳೆದ ವರ್ಷ ಟಿಪ್ಪು ಜಯಂತಿ ಆಚರಿಸಲು ಹೋಗಿ ರಾಜ್ಯದಾದ್ಯಂತ ಪರ– ವಿರೋಧಗಳ ಅಲೆಯೇ ಎದ್ದಿತ್ತು.ಇಂತಹ ಅಜೆಂಡಾಗಳಿಂದಾಗಿಯೇ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ, ಅತಂತ್ರ ಸ್ಥಿತಿ ನಿರ್ಮಾಣವಾಯಿತು. ಆ ಸ್ಥಿತಿ ಇನ್ನೂ ಬದಲಾಗಿಲ್ಲ. ಹೀಗಿರುವಾಗ ಸಚಿವರ ಇಂಥ ಹೇಳಿಕೆ ಸಮಂಜಸವಲ್ಲ.

ಜಾತಿ– ಮತಗಳ ಆಧಾರದ ವೋಟ್ ಬ್ಯಾಂಕ್ ತಂತ್ರ ನಿಲ್ಲಬೇಕಾಗಿದೆ. ಇದರಿಂದ ಮುಸ್ಲಿಮರಿಗೇನೂ ಲಾಭವಿಲ್ಲ. ಮುಸ್ಲಿಮರು ಶಿಕ್ಷಣದಿಂದ ವಂಚಿತರಾಗಿ ದಲಿತರಿಗಿಂತಲೂ ಹೀನ ಸ್ಥಿತಿಯಲ್ಲಿದ್ದಾರೆ. ಇವರನ್ನು ಸುಶಿಕ್ಷಿತರಾಗಿಸಲು, ಸಾಮಾಜಿಕವಾಗಿ ಮೇಲೆತ್ತಲು ಸಚಿವರು ಮುಂದಾಗಲಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.