ADVERTISEMENT

ಉತ್ಪಾದಕ ವಲಯಕ್ಕೆ ಒತ್ತು ನೀಡಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 19:30 IST
Last Updated 21 ಫೆಬ್ರುವರಿ 2020, 19:30 IST

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಜರ್ಮನಿಯಿಂದ ಲೋಹದ ಕಸದ ಡಬ್ಬಿಗಳನ್ನು ಆಮದು ಮಾಡಿಕೊಂಡಿರುವುದು (ಪ್ರ.ವಾ., ಫೆ.16) ವಿಪರ್ಯಾಸ. ರಫ್ತಿಗಿಂತ ಆಮದಿಗೆ ನಾವು ಹೆಚ್ಚು ಒತ್ತು ಕೊಡುತ್ತಿದ್ದೇವೆ. ದಶಕಗಳಿಂದಲೂ ಇದೇ ಪರಿಪಾಟ. ಉದ್ಯೋಗ ಸೃಷ್ಟಿ ಎನ್ನುವುದು ಪಕ್ಷಗಳ ಪ್ರಣಾಳಿಕೆಯಲ್ಲಿ ಮಾತ್ರ ಉಳಿಯುವ ಭರವಸೆಯಾಗಿದೆ. ಎಲ್ಲದಕ್ಕೂ ವಿದೇಶಗಳ ಮೇಲೆ ಅವಲಂಬನೆಯಾದರೆ, ಇನ್ನೆಲ್ಲಿ ಉದ್ಯೋಗ ಸೃಷ್ಟಿ? ಇಲ್ಲಿನ ನಿರುದ್ಯೋಗ ಸಮಸ್ಯೆ ಹೇಗೆ ನಿವಾರಣೆ ಆಗುತ್ತದೆ?

ಚೀನಾದಲ್ಲಿ ಇತ್ತೀಚೆಗೆ ಕಂಡುಬಂದಿರುವ ಕೋವಿಡ್‌- 19 ವೈರಸ್‌ನಿಂದ ಅಲ್ಲಿನ ಉತ್ಪಾದಕ ವಲಯ ಸ್ತಬ್ಧವಾಗಿದೆ. ಇದರಿಂದ ನಮ್ಮ ದೇಶದ ಆರ್ಥಿಕತೆಗೂ ಪೆಟ್ಟು ಬಿದ್ದಿದೆ. ಹೊಸ ತಂತ್ರಜ್ಞಾನ ಆವಿಷ್ಕಾರಕ್ಕೆ ವೇದಿಕೆ ಕಲ್ಪಿಸಿ, ಇಲ್ಲಿನ ಉತ್ಪಾದಕ ವಲಯಕ್ಕೆ ಒತ್ತು ನೀಡಬೇಕು. ಉಲ್ಬಣಿಸುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಇದರಿಂದ ಸ್ವಲ್ಪಮಟ್ಟಿಗಾದರೂ ನಿವಾರಿಸಬಹುದು.

–ರವಿಕುಮಾರ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.