ADVERTISEMENT

ವಾಚಕರ ವಾಣಿ: ನಿರ್ಲಕ್ಷ್ಯ ತೋರಿದವರಿಗೆ ಶಿಕ್ಷೆಯಾಗಲಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 19:30 IST
Last Updated 13 ನವೆಂಬರ್ 2020, 19:30 IST

ಬೆಂಗಳೂರಿನ ರಾಸಾಯನಿಕ ಕಾರ್ಖಾನೆಯೊಂದರ ಗೋದಾಮಿನಲ್ಲಿ ಇತ್ತೀಚೆಗೆ ಬೆಂಕಿ ಅವಘಡ ಸಂಭವಿಸಿ, ಗೋದಾಮು ಸೇರಿದಂತೆ ಅಕ್ಕಪಕ್ಕದ ಕಟ್ಟಡಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಜನವಸತಿ ಪ್ರದೇಶದಲ್ಲಿ ಯಾವುದೇ ರೀತಿಯ ಅನುಮತಿ ಇಲ್ಲದೆ ಅಕ್ರಮವಾಗಿ ಈ ಗೋದಾಮನ್ನು ನಡೆಸಿಕೊಂಡು ಬಂದಿರುವುದೇ ಇದಕ್ಕೆಲ್ಲ ಕಾರಣ. ಕಾರ್ಖಾನೆಯ ಮಾಲೀಕರ ಜೊತೆಗೆ ಬಿಬಿಎಂಪಿಯವರ ನಿರ್ಲಕ್ಷ್ಯವೂ ಇಲ್ಲಿ ಎದ್ದುಕಾಣುತ್ತದೆ. ಅನುಮತಿ ಇಲ್ಲದೆ ನಡೆಸಿಕೊಂಡು ಬರುತ್ತಿರುವ ಈ ಕಾರ್ಖಾನೆಯು ಬಿಬಿಎಂಪಿಯವರ ಕಣ್ಣಿಗೆ ಇದುವರೆವಿಗೂ ಕಾಣಿಸಲೇ ಇಲ್ಲವೆ? ಆಗಿರುವ ನಷ್ಟವನ್ನು ಕಾರ್ಖಾನೆಯ ಮಾಲೀಕರೇ ತುಂಬಿಕೊಡಬೇಕು.

ಜನವಸತಿ ಪ್ರದೇಶದಲ್ಲಿ ಇರುವ ಈ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸದೇ ಇದ್ದಿದ್ದರೆ ಇದು ಇಂದಿಗೂ ಬೆಳಕಿಗೆ ಬರುತ್ತಿರಲಿಲ್ಲ. ಬೆಂಗಳೂರಿನಲ್ಲಿ ಇಂತಹ ಎಷ್ಟೋ ಅಕ್ರಮ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿರಬಹುದು. ಅಂತಹವುಗಳನ್ನು ಮೊದಲು ಪತ್ತೆ ಹಚ್ಚಬೇಕಾಗಿದೆ. ಸರ್ಕಾರ ಪ್ರತೀ ಸಲ ಎಚ್ಚೆತ್ತುಕೊಳ್ಳುವುದಕ್ಕೆ ಇಂತಹ ದುರ್ಘಟನೆಗಳೇ ಸಾಕ್ಷಿಯಾಗಬೇಕೇ? ದುರಂತ ಘಟಿಸುವ ಮೊದಲೇ ಆಯಾ ಇಲಾಖೆಯವರು ಅಕ್ರಮಗಳನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಚಾಲನೆ ನೀಡಬಾರದೇ?

–ಮುರುಗೇಶ ಡಿ., ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.