ADVERTISEMENT

ಕಸ ವಿಲೇವಾರಿ ಖಾತೆ ತೆರೆಯಬೇಕಾದೀತು...!

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 19:46 IST
Last Updated 29 ಆಗಸ್ಟ್ 2019, 19:46 IST

ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಮಾಡಿದ ಮುಖ್ಯ ಆದೇಶಗಳಲ್ಲಿ, ಬೆಂಗಳೂರಿ‌ನ ಕಸ ವಿಲೇವಾರಿಗೆ ಸೂಚನೆ ನೀಡಿದ್ದೂ ಒಂದು. ಕಸ ವಿಲೇವಾರಿ ಸಮಸ್ಯೆಯ ಅಗಾಧತೆಯನ್ನು ಇದರಿಂದ ಊಹಿಸಬಹುದು. ಈ ಸಮಸ್ಯೆ ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ. ರಾಜ್ಯದ ಪ್ರತಿ ಪಟ್ಟಣ, ನಗರವೂ ಈ ಸಮಸ್ಯೆ ಅನುಭವಿಸುತ್ತಿವೆ. ಕಸ ವಿಲೇವಾರಿಗೆ ಸರ್ಕಾರ ಗಂಭೀರ ಯೋಜನೆಗಳನ್ನು ಕಾರ್ಯಗತಗೊಳಿಸದಿದ್ದರೆ ಕಸ ನಿರ್ವಹಣೆಗೆ ಒಬ್ಬ ಮಂತ್ರಿಯನ್ನೇ ನೇಮಕ ಮಾಡಬೇಕಾಗುತ್ತದೆ.

ನಗರ ಪ್ರದೇಶಗಳಲ್ಲಿ ಹಳಸಿದ ಆಹಾರ ಪದಾರ್ಥಗಳನ್ನು ಬಡಾವಣೆಯಲ್ಲಿ ಕೂರುವ ಕಟ್ಟೆಗಳು, ಸೇತುವೆಗಳ ಮೇಲೆ ಹಾಕಿ ಸಾರ್ವಜನಿಕರು ತಮ್ಮ ಮನೆಯ ಕೊಳೆ ತೊಳೆದುಕೊಳ್ಳುತ್ತಾರೆ. ಅದು ಸೊಳ್ಳೆಗಳು ಬೆಳೆಯಲು ಸಹಕಾರಿಯಾಗಿದೆ. ಕೊಳೆತ ಆಹಾರ ಪದಾರ್ಥಗಳಿಂದ ಅಡುಗೆ ಅನಿಲ ಉತ್ಪಾದಿಸುವ ತಂತ್ರಜ್ಞಾನ ಇರುವು ದರಿಂದ ಅದನ್ನು ಸದ್ಬಳಕೆ ಮಾಡಿಕೊಳ್ಳುವುದು ಸೂಕ್ತ. ಪ್ರತಿ ಬೀದಿಯ ಕೊನೆಯಲ್ಲಿ ಬೇಡದ ಆಹಾರ ಪದಾರ್ಥ ಸುರಿಯಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು.

ಪ್ರತಿ ವಾರ್ಡ್‌ನಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸುವ ರೀತಿಯಲ್ಲಿ ಅಡುಗೆ ಮನೆ ಕಸವನ್ನು ಅಡುಗೆ ಅನಿಲವನ್ನಾಗಿ ಪರಿವರ್ತಿಸುವ ಘಟಕವನ್ನೂ ತೆರೆಯಬೇಕು. ಹಾಗೆಯೇ ಸ್ಯಾನಿಟರಿ ಪ್ಯಾಡ್‌ಗಳನ್ನು ವಿಲೇವಾರಿ ಮಾಡಲು ಹೆಣ್ಣು ಮಕ್ಕಳ ಹಾಸ್ಟೆಲ್‌ಗಳಲ್ಲಿ ಇರುವಂತೆ ವಾರ್ಡ್‌ಗಳಲ್ಲಿ ಒಂದೊಂದು ಬರ್ನರ್‌ ಅನ್ನು ಇಡಬೇಕಾದಅವಶ್ಯಕತೆ ಇದೆ. ಇದರಿಂದ ಗೃಹಿಣಿಯರು ಮುಜುಗರವಿಲ್ಲದೆ ನೈಸರ್ಗಿಕ ಕ್ರಿಯೆಯನ್ನು ಮುಗಿಸಿಕೊಳ್ಳಲು ಅನುಕೂಲವಾಗುತ್ತದೆ.

ADVERTISEMENT

-ಎಸ್.ರವಿ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.