ADVERTISEMENT

ಸ್ಫೂರ್ತಿದಾಯಕ ‘ಬೆಳಕಿನ ಬಾಲೆ’

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 19:45 IST
Last Updated 13 ಡಿಸೆಂಬರ್ 2020, 19:45 IST

‘ಗೀತಾಂಜಲಿ ಎಂಬ ಬೆಳಕಿನ ಬಾಲೆ’ ಎಂಬ ನಾಗೇಶ ಹೆಗಡೆ ಅವರ ಲೇಖನ (ಪ್ರ.ವಾ., ಡಿ. 10) ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಸ್ಫೂರ್ತಿದಾಯಕ. ಹೀಗೇ ಬೆಳೆಯಬೇಕೆಂದು ಮಕ್ಕಳ ಮೇಲೆ ಒತ್ತಡ ಹೇರುವ ಬದಲು, ಅವರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಬೆಳೆಯಲು ಬಿಟ್ಟು ಅವಕಾಶಗಳನ್ನು ಒದಗಿಸಿಕೊಟ್ಟಾಗ ಅದ್ಭುತ ಪ್ರತಿಭೆಗಳು ಹೊರಬರಲು ಸಾಧ್ಯ. ಸ್ವಾತಂತ್ರ್ಯ ಇದ್ದಾಗ ಮಾತ್ರ ಮಕ್ಕಳ ಕಲಿಕೆ ಸರಾಗವಾಗಿ ಸಾಗಬಲ್ಲದು. ಹಾಗಾಗಿ ಪೋಷಕರು ಮಕ್ಕಳ ಆಸಕ್ತಿಯ ಕ್ಷೇತ್ರವನ್ನು ಸೀಮಿತಗೊಳಿಸದೆ ಅವರ ಮನಸ್ಸಿನ ವಿಕಸನಕ್ಕೆ ಪೂರಕವಾಗಿ ನಡೆದುಕೊಳ್ಳುವುದು ಒಳ್ಳೆಯದು.

-ಆಶಾ ಎಂ.ಜೆ., ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT