ADVERTISEMENT

ವಾಚಕರ ವಾಣಿ: ಮೂಲ ಸೌಕರ್ಯದ ಕೊರತೆ ಅಕ್ಷಮ್ಯ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 19:30 IST
Last Updated 13 ನವೆಂಬರ್ 2020, 19:30 IST

ಒಂದು ಆಸ್ಪತ್ರೆಯೆಂದರೆ ಅಲ್ಲಿ ಸರಿಯಾದ ಕಟ್ಟಡ, ವಿದ್ಯುತ್, ನೀರು, ಹಾಸಿಗೆ ವ್ಯವಸ್ಥೆ, ಚಿಕಿತ್ಸೆಗೆ ಬೇಕಾದ ಸಾಧನಗಳು ಹಾಗೂ ನಿಷ್ಠೆಯಿಂದ ಸೇವೆ ಮಾಡುವ ಅನುಭವಿ ವೈದ್ಯರು, ನಸ್೯ಗಳು ಮತ್ತು ಇತರ ಸೇವಾ ಸಿಬ್ಬಂದಿ ಇರುವುದು ಮುಖ್ಯ. ಹೀಗಿದ್ದಾಗ ಅಲ್ಲಿ ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯಲು ಸಾಧ್ಯ. ಆದರೆ ಚಿತ್ತಾ‍ಪುರ ತಾಲ್ಲೂಕಿನ ಕೊಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್‌ ಒಬ್ಬರು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೆರಿಗೆ ಮಾಡಿಸಿದ್ದು ಅಭಿನಂದಿಸಲೇಬೇಕಾದ ಸಂಗತಿ. ಆದರೆ ಈ ಕಾರ್ಯಕ್ಕೆ ಮುನ್ನ ವಿದ್ಯುತ್ ಕಡಿತಗೊಂಡಿದ್ದು, ಜೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೂ ಯಾರೂ ಸ್ವೀಕರಿಸದೇ ಹೋದದ್ದು ಮತ್ತು ಎರಡು ತಾಸು ಕಾದರೂ ವಿದ್ಯುತ್‌ ಬಾರದೇ ಹೋದದ್ದು ಜೆಸ್ಕಾಂ ಸಿಬ್ಬಂದಿಯ ನಿಲ೯ಕ್ಷ್ಯದ ಧೋರಣೆಯನ್ನು ತೋರಿಸುತ್ತದೆ. ಮೂಲ ಸೌಕರ್ಯದ ಕೊರತೆ ಇರುವ ಇಂತಹ ಸ್ಥಿತಿಯಲ್ಲಿ ಹೆರಿಗೆ ಮಾಡಿಸುವುದೆಂದರೆ ಎರಡು ಜೀವಗಳನ್ನು ಪಣಕ್ಕಿಟ್ಟಂತೆ ಅಲ್ಲವೇ?

–ನಾಗೇಶ್ ಹರಳಯ್ಯ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT