ADVERTISEMENT

ಬಸ್‌ಪಾಸ್‌: ಪ್ರಯಾಣಿಕರಿಗೆ ನಷ್ಟವಾಗದಿರಲಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 20:00 IST
Last Updated 31 ಮಾರ್ಚ್ 2020, 20:00 IST

ಬಹುತೇಕ ನೌಕರರು ಮತ್ತು ಕೆಲಸಗಾರರು ತಮ್ಮ ದಿನವಹಿ ಸಂಚಾರಕ್ಕೆ ಸರ್ಕಾರಿ ಸಾರಿಗೆಯ ಮಾಸಿಕ ಬಸ್‌ಪಾಸ್ ಪಡೆದಿರುತ್ತಾರೆ. ಅದು ₹600ರಿಂದ ಪ್ರಾರಂಭವಾಗಿ ₹5,000ದ ತನಕ ಇದೆ. ಕೊರೊನಾ ದಿಗ್ಬಂಧನದಿಂದಾಗಿ ಎಲ್ಲ ಮಾಸಿಕ ಬಸ್‌ಪಾಸ್‌ದಾರರು ತಮ್ಮ ಪಾಸನ್ನು ಉಪಯೋಗಿಸಿಲ್ಲ.

ಸಾರಿಗೆ ಸೇವೆಪುನರಾರಂಭವಾದಾಗ, ಆ ದಿನಾಂಕದಿಂದ ಮತ್ತೆ ಮಾಸಿಕ ಪಾಸನ್ನು ನವೀಕರಿಸಿ, ಬಸ್‌ಪಾಸ್‌ದಾರರಿಗೆ ಅನುಕೂಲ ಮಾಡಿಕೊಡಬೇಕು.

-ಮೃತ್ಯುಂಜಯ ಕೋಡಿಹಳ್ಳಿ, ಶಿಗ್ಗಾವಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.