ADVERTISEMENT

ಅಂಗವಿಕಲರಿಗೆ ಪ್ರತ್ಯೇಕ ವಿ.ವಿ. ಸಲ್ಲ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 29 ಮೇ 2020, 20:30 IST
Last Updated 29 ಮೇ 2020, 20:30 IST

ಅಂಗವಿಕಲರಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ರಾಜ್ಯ ಸರ್ಕಾರದ ಶೈಕ್ಷಣಿಕ ಸಲಹೆಗಾರ ಪ್ರೊ. ಎಂ.ಆರ್.ದೊರೆಸ್ವಾಮಿ ಅವರು ಮುಖ್ಯಮಂತ್ರಿಗೆ ಸಲಹೆ ನೀಡಿರುವುದು, ಅಂಗವಿಕಲ ಸಮೂಹಕ್ಕೆ ಆಘಾತಕಾರಿ ಬೆಳವಣಿಗೆ. ಸಮನ್ವಯ ಶಿಕ್ಷಣದ ಮೂಲಕ ಅಂಗವಿಕಲರನ್ನು ಮುಖ್ಯವಾಹಿನಿಗೆ ತರಲು ಇಡೀ ರಾಷ್ಟ್ರ ಚಿಂತಿಸುತ್ತಿರುವಾಗ, ಇವರು ಪ್ರತ್ಯೇಕದ ಪಠಣ ಮಾಡುತ್ತಿರುವುದು ಸಮಂಜಸವಲ್ಲ.

ಅಂಗವಿಕಲರು ಸಾಮಾನ್ಯರೊಂದಿಗೆ ಬೆರೆತು ಸಮಾಜದ ಮುಖ್ಯವಾಹಿನಿಗೆ ಬರಬೇಕೇ ವಿನಾ ಪ್ರತ್ಯೇಕಗೊಂಡು ಸಮಾಜದಲ್ಲಿ ಅಸ್ಪೃಶ್ಯರಾಗಬಾರದು. 2016ರ ಅಂಗವಿಕಲರ ಹಕ್ಕುಗಳು ನಿಗದಿಪಡಿಸಿರುವಂತೆ, ಈಗಿರುವ ವಿಶ್ವವಿದ್ಯಾಲಯಗಳಲ್ಲೇ ಮೀಸಲಾತಿ ಒದಗಿಸಿ, ಆರ್ಥಿಕ ಹೊರೆಯಾಗದಂತೆ ಕಲಿಕೆಗೆ ಪ್ರೋತ್ಸಾಹಿಸಿ ಪೂರಕ ವಾತಾವರಣ ನಿರ್ಮಾಣದ ವ್ಯವಸ್ಥೆಯೊಂದಿಗೆ ಸಕಲ ಸೌಲಭ್ಯಗಳು ಕೈಗೆಟುಕುವಂತೆ ಮಾಡಬೇಕು. ಪ್ರತೀ ಹಂತದಲ್ಲೂ ಮೊದಲ ಆದ್ಯತೆ ಆಧಾರದ ಮೇಲೆ ಗುರುತಿಸಬೇಕು. ಆಗಮಾತ್ರ ಅಂಗವಿಕಲರ ಸಬಲೀಕರಣ ಸಾಧ್ಯ. ಪ್ರತ್ಯೇಕಿಸಿದ್ದೇ ಆದಲ್ಲಿ ಸಮಾಜವು ಅಂಗವಿಕಲರು ಹಾಗೂ ಅವರಿಗಾಗಿ ಸ್ಥಾಪಿಸುವ ವಿಶ್ವವಿದ್ಯಾಲಯವನ್ನು ನೋಡುವ ದೃಷ್ಟಿಕೋನ ಮತ್ತಷ್ಟು ಹೀನಾಯ ಸ್ಥಿತಿ ತಲುಪುತ್ತದೆ. ಅಲ್ಲದೆ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಅಂಗವಿಕಲರನ್ನು ಒಳಗೊಂಡ ಶೈಕ್ಷಣಿಕ ಹಾಗೂ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ತೀರ್ಮಾನಿಸುವುದು ಸೂಕ್ತ.

ಚಂದ್ರಶೇಖರ ಪುಟ್ಟಪ್ಪ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.