ADVERTISEMENT

ಇಂದಿರಾ ಕ್ಯಾಂಟೀನ್ ಮತ್ತು ರಾಜಕೀಯ ದ್ವೇಷ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 19:31 IST
Last Updated 4 ಏಪ್ರಿಲ್ 2021, 19:31 IST

‘ಅತ್ತೆಯ ಮೇಲಿನ ಕೋಪ ಕೊತ್ತಿಯ ಮೇಲೆ’ ಎಂಬಂತೆ ಸಿದ್ದರಾಮಯ್ಯನವರ ಮೇಲಿನ ರಾಜಕೀಯ ದ್ವೇಷವನ್ನು ಇಂದಿರಾ ಕ್ಯಾಂಟೀನ್ ಮೇಲೆ ಚಲಾಯಿಸಿ, ಮುಖ್ಯಮಂತ್ರಿ ಯಡಿಯೂರಪ್ಪನವರು ದುರ್ಬಲ ವರ್ಗಗಳ ‘ಅನ್ನಭಾಗ್ಯ’ದ ತುತ್ತನ್ನು ಕಿತ್ತುಕೊಳ್ಳುವ ರಾಜಕೀಯವನ್ನು ಮಾಡುತ್ತಿದ್ದಾರೆ ಎಂದು ‘ಇಂದಿರಾ ಕ್ಯಾಂಟೀನ್’ನ ಆಹಾರ ವಂಚಿತರು ದೂಷಿಸುತ್ತಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ದಿನಗೂಲಿಯೂ ಸಿಗದೆ ಹಸಿವಿನಿಂದ ಕಂಗಾಲಾಗಿದ್ದ ಅಸಂಖ್ಯಾತ ದುರ್ಬಲ ವರ್ಗದ ಶ್ರಮಜೀವಿಗಳಿಗೆ ಅಗ್ಗದ ಬೆಲೆಯಲ್ಲಿ ದೊರಕುತ್ತಿದ್ದ ಇಂದಿರಾ ಕ್ಯಾಂಟೀನ್ ಆಹಾರ ಜೀವನಾಧಾರವಾಗಿತ್ತು. ಆದರೆ ಈಗ ರಾಜ್ಯ ಸರ್ಕಾರದ ಅನಾದರ ಹಾಗೂ ವಿರೋಧ ಪಕ್ಷದ ಮೇಲಿನ ಅದರ ರಾಜಕೀಯ ದ್ವೇಷದಿಂದಾಗಿ ನಿರ್ಗತಿಕರು ನರಳುವಂತಾಗಿದೆ.

-ಬಿ.ಎಂ.ಮಹಾದೇವ ಮೂರ್ತಿ, ಮೈಸೂರು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT