ADVERTISEMENT

ವಾಚಕರ ವಾಣಿ: ಕ್ರೂರ ಶಿಕ್ಷೆಯಿಂದ ಮನಃಪರಿವರ್ತನೆ ಸಾಧ್ಯವೇ?

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 16:33 IST
Last Updated 23 ಆಗಸ್ಟ್ 2020, 16:33 IST

ಹಿರಿಯೂರು ತಾಲ್ಲೂಕಿನ ಸರಸ್ವತಿಹಟ್ಟಿಯಲ್ಲಿ ಹೋರಿಗಳನ್ನು ಕಳ್ಳತನ ಮಾಡಿ ಸಿಕ್ಕಿಬಿದ್ದ ಆರೋಪಿಯನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿ, ಕತ್ತೆಯ ಮೇಲೆ ಕೂರಿಸಿ ಬೆತ್ತಲೆ ಮೆರವಣಿಗೆ ಮಾಡಿರುವುದು (ಪ್ರ.ವಾ. ಆ. 22) ಅಮಾನವೀಯ. ನಾಗರಿಕ ಸಮಾಜ ತಲೆತಗ್ಗಿಸುವಂತಹ ನಡೆ ಇದು.

ಆತ ನಿಜಕ್ಕೂ ಕಳ್ಳತನ ಮಾಡಿದ್ದರೆ ಅದು ತಪ್ಪು. ಆದರೆ ಆತನ ಮನೋಭಾವ ಬದಲಿಸಲು ಅನುಸರಿಸಿದ ಮಾರ್ಗವು ಒಪ್ಪುವಂತಹುದಲ್ಲ. ಕಾನೂನನ್ನು ಕೈಗೆ ತೆಗೆದುಕೊಂಡು ದೈಹಿಕವಾಗಿ ದಂಡಿಸಿದ್ದಲ್ಲದೆ, ಜನರ ಮುಂದೆ ‘ಮಾನಸಿಕ ಹಿಂಸೆ’ಯಂಥ ಶಿಕ್ಷೆಗೆ ಗುರಿಪಡಿಸಿ ಬುದ್ಧಿ ಕಲಿಸಬಹುದು ಎಂದು ತಿಳಿಯುವ ಜನರಿಗೆ ಪೊಲೀಸ್ ಇಲಾಖೆ, ನ್ಯಾಯಾಲಯ, ಜೈಲು ಎಲ್ಲವೂ ಜನರ ಹಣದಿಂದಲೇ ಸ್ಥಾಪಿತವಾಗಿವೆ ಎಂಬ ಪ್ರಜ್ಞೆ ಬರುವುದು ಯಾವಾಗ? ಕಳ್ಳನಿಗೆ ಮಾನಸಿಕವಾಗಿ ಅಪಮಾನವಾಗುವಂಥ ಶಿಕ್ಷೆಯಾಗಬೇಕೋ ಅಥವಾ ಆತನ ಮನಃಪರಿವರ್ತನೆ ಆಗುವುದು ಮುಖ್ಯವೋ?

ಡಾ. ಜಿ.ಬೈರೇಗೌಡ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.