ADVERTISEMENT

ಡಿ.ಸಿ.ಎಂ...1–30...?

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 20:15 IST
Last Updated 28 ಆಗಸ್ಟ್ 2019, 20:15 IST

ಮಂತ್ರಿಮಂಡಲಕ್ಕೆ ಒಬ್ಬರೇ ‘ಮುಖ್ಯ’ಮಂತ್ರಿ ಎಂಬ ಕಾಲ ಹೋಯಿತು ಎನಿಸುತ್ತದೆ. ಕರ್ನಾಟಕದಲ್ಲಿ ಸದ್ಯ ಒಬ್ಬ ಮುಖ್ಯಮಂತ್ರಿ ಹಾಗೂ ಮೂವರು ಉಪ ಮುಖ್ಯಮಂತ್ರಿಗಳು. ಅದರಲ್ಲೂ ರ‍್ಯಾಂಕ್‌: ಉಪಮುಖ್ಯಮಂತ್ರಿ 1, 2 ಹಾಗೂ 3. ಮುಂದೊಂದು ಕಾಲ ಹೀಗೂ ಬರಬಹುದು– ಸಂಪುಟದಲ್ಲಿ ಇರುವವರೆಲ್ಲ ಡಿ.ಸಿ.ಎಂ.ಗಳು! ಅವರನ್ನು ರ‍್ಯಾಂಕ್‌ ನಂಬರ್ 1, 2, 3... 30... ಎಂದು ಗುರುತಿಸಬಹುದೇನೊ? ಎಲ್ಲರನ್ನೂ ಖುಷಿಪಡಿಸುವ ಅದ್ಭುತ ತಂತ್ರವಿದು.

ತಂತ್ರವಷ್ಟೇ ಆದರೆ ಯಾರೂ ಖುಷಿಯಾಗಿ ಇರುವುದಿಲ್ಲ. ಕೊನೆಯ ರ‍್ಯಾಂಕಿನ ಡಿ.ಸಿ.ಎಂ ಮೊದಲ ರ‍್ಯಾಂಕಿಗೆ ಬರಬೇಕೆನ್ನುತ್ತಾರೆ. ಸಿ.ಎಂ. ಆಗಬೇಕೆನ್ನುತ್ತಾರೆ! ಆಗ ಮತ್ತೆ ಭಿನ್ನಮತ, ಸಂಘರ್ಷ ಇದ್ದದ್ದೇ.
–ಸುಭಾಸ ಯಾದವಾಡ,ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT