ADVERTISEMENT

ಉಪಚುನಾವಣೆ ಮುಂದೂಡಿಕೆ: ಬಿಜೆಪಿಗೆ ವರ?

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 20:07 IST
Last Updated 26 ಸೆಪ್ಟೆಂಬರ್ 2019, 20:07 IST

ಉಪಚುನಾವಣಾ ಫಲಿತಾಂಶವನ್ನು ಹೀಗೇ ಎಂದು ಊಹಿಸಲಾಗದು. ಆಡಳಿತಾರೂಢ ಬಿಜೆಪಿ ಗೆದ್ದಿದ್ದರೆ... ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ತಾನು ಅಧಿಕಾರಕ್ಕೆ ಏರಲು ನೆರವಾದ ಶಾಸಕರೆಲ್ಲರಿಗೂ ಸಚಿವ ಸ್ಥಾನ ನೀಡಬೇಕಾಗಿತ್ತು. ಅದಕ್ಕೆ ಅವರು ಅರ್ಹರೋ ಅಲ್ಲವೋ ಎಂಬುದನ್ನೂ ಪರಿಗಣಿಸದೆ, ಅವರನ್ನು ಸಹಿಸಿಕೊಳ್ಳಬೇಕಿತ್ತು. ಮಧ್ಯಂತರ ಚುನಾವಣೆಯ ಕನಸಿಗೂ ತಿಲಾಂಜಲಿ ಕೊಡಬೇಕಿತ್ತು.

ಸೋತಿದ್ದರೆ... ಹಾವು ಮುಂಗುಸಿಯಂತಿರುವ ವಿರೋಧಿಗಳು ಅಧಿಕಾರಕ್ಕಾಗಿ ಒಂದಾಗುವುದನ್ನು ನೋಡುತ್ತಾ, ಮತ್ತೊಮ್ಮೆ ಇದ್ದೂ ಇಲ್ಲದಂತೆ ಇರಬೇಕಿತ್ತು. ಉಪಚುನಾವಣೆ ಮುಂದಕ್ಕೆ ಹೋಗಿರುವುದರಿಂದ ಸದ್ಯದ ಮಟ್ಟಿಗೆ ಬಿಜೆಪಿಗೆ ಬಾಧಕ ಇಲ್ಲ. ಈಗ ಮಹಾರಾಷ್ಟ್ರ, ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಮತ್ತೆ ‘ಮೋದಿ ಮೋಡಿ’ ಕೆಲಸ ಮಾಡಿದರೆ, ಇಲ್ಲಿಯೂ ಮಧ್ಯಂತರ ಚುನಾವಣೆಗೆ ಮುಂದಾಗಿ ಬಿಜೆಪಿ ನೇತೃತ್ವದಲ್ಲಿ ಶಕ್ತಿಯುತ ಸರ್ಕಾರವನ್ನು ಸ್ಥಾಪಿಸುವ ಅವಕಾಶ ದೊರಕುತ್ತದೆ. ಅಂತೂ ಉಪಚುನಾವಣೆ ಮುಂದೂಡಿಕೆ ಬಿಜೆಪಿಗೆ ವರವಾಗಿದೆ ಎನ್ನಬಹುದು. ಇದಕ್ಕೇ ಅದೃಷ್ಟ ಎನ್ನುವುದು. ಜೆಡಿಎಸ್‌ ಕೇವಲ 37 ಸ್ಥಾನಗಳನ್ನು ಗಳಿಸಿದ್ದರೂ ಮುಖ್ಯಮಂತ್ರಿಯಾದ ಎಚ್‌.ಡಿ.ಕುಮಾರಸ್ವಾಮಿ ಅವರ ಅದೃಷ್ಟದಂತೆ!

-ಸತ್ಯಬೋಧ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.