ADVERTISEMENT

ಪ್ರವಾಹ ಸಂತ್ರಸ್ತರ ತಾತ್ಕಾಲಿಕ ವಾಸ್ತವ್ಯ | ಪಾಪಾತ್ಮ ಇನ್ನೂ ಜೀವಂತವಿದ್ದಾನೆ!

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 20:00 IST
Last Updated 21 ಆಗಸ್ಟ್ 2019, 20:00 IST

ಹಾವೇರಿ ಜಿಲ್ಲೆಯ ಕುಣಿಮೆಳ್ಳಿ ಹಳ್ಳಿಯ ಶಾಲೆಯಲ್ಲಿ ಪ್ರವಾಹ ಸಂತ್ರಸ್ತರು ತಾತ್ಕಾಲಿಕ ವಾಸ್ತವ್ಯ ಪಡೆದಿರುವ ವಿಚಾರದಲ್ಲಿ ಕಲಿಕೆ ಹಾಗೂ ಮಾನವೀಯತೆ ನಡುವೆ ಸಂಘರ್ಷ ತಲೆದೋರಿರುವುದು (ಪ್ರ.ವಾ.,ಆ. 21) ಬೇಸರ ಉಂಟು ಮಾಡಿತು. ಪ್ರೀತಿ, ವಿಶ್ವಾಸ, ತ್ಯಾಗ, ಬಲಿದಾನ ಹಾಗೂ ದಾಸೋಹಕ್ಕೆ ಹೆಸರಾದ; ಶರಣರು, ದಾಸರು ಜನಿಸಿದ ಕನ್ನಡ ನಾಡಿಗೆ ಇಂತಹ ಬೆಳವಣಿಗೆ ಶೋಭೆ ತರುವಂತಹುದಲ್ಲ. ಸೂರಿಲ್ಲದೆ ಹೊತ್ತಿನ ಊಟಕ್ಕೂ ಸರ್ಕಾರದ ಮುಖ ನೋಡಬೇಕಾದವರ ಅಸಹಾಯಕ ಸ್ಥಿತಿಯನ್ನು ಆ ಊರಿನ ಜನ ಅರ್ಥ ಮಾಡಿಕೊಳ್ಳಬೇಕಿತ್ತು. ಸಂತ್ರಸ್ತರಿಗೆ ತಾಳ್ಮೆಯಿಂದ ಮನವರಿಕೆ ಮಾಡಿಕೊಟ್ಟು, ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದು, ಅವರಿಗೆ ಸೂಕ್ತ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲು ನೆರವಾಗಬೇಕಿತ್ತು. ಅದನ್ನು ಬಿಟ್ಟು, ‘ಸೂರಿಲ್ಲದಿದ್ದರೆ ಬೀದಿಯಲ್ಲಿ ಮಲಗಿ, ನಾವೇನೂ ಮಾಡಲಾಗದು’ ಎಂಬ ಮಾತು ಅಮಾನವೀಯ.

ಮನುಷ್ಯ, ಮಾನವೀಯತೆಯನ್ನು ಮರೆತು ಅಟ್ಟಹಾಸ ಮೆರೆದಿದ್ದಕ್ಕೆ ಪ್ರಕೃತಿ ಪಾಠ ಕಲಿಸುತ್ತಿದೆ. ಆದರೂ ನಮ್ಮೊಳಗಿನ ಪಾಪಾತ್ಮ ಜೀವಂತವಾಗಿ ಇರುವುದು ದುರ್ದೈವ. ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ದೊರೆತರೂಸ್ಪಂದಿಸದಿರುವುದು ಸರಿಯಲ್ಲ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಸಂತ್ರಸ್ತರಿಗೆ ಸೂಕ್ತ ವಸತಿ ವ್ಯವಸ್ಥೆಕಲ್ಪಿಸಲಿ.

ಶ್ವೇತಾ ಎನ್.,ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.