ADVERTISEMENT

‌ವಾಚಕರ ವಾಣಿ | ತಪ್ಪು ಒಪ್ಪಿಕೊಂಡ ಮಾತ್ರಕ್ಕೆ...

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 19:30 IST
Last Updated 25 ಮಾರ್ಚ್ 2022, 19:30 IST

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಕುಟುಂಬದ ವಿರುದ್ಧ ನಕಲಿ ಜಾತಿ ಪ್ರಮಾಣಪತ್ರ ಪಡೆದ ಆರೋಪ ಕೇಳಿಬಂದಿದೆ. ‘...ನನ್ನ ಅಣ್ಣ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದುಕೊಂಡು ಕಲಬುರಗಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ. ಆತನೇ ನನ್ನ ಮಗಳಿಗೂ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡಿಸಿದ್ದ. ವಿಷಯ ಗೊತ್ತಾದ ತಕ್ಷಣ ಅದನ್ನು ಮರಳಿಸಲು ಸೂಚಿಸಿದ್ದೆ’ ಎಂದು ಅವರು ವಿವರಣೆ ನೀಡಿದ್ದಾರೆ. ಜಾತಿ ಪ್ರಮಾಣಪತ್ರ ಹೇಗೆ ದುರ್ಬಳಕೆ ಆಗುತ್ತಿದೆ ಎಂಬುದಕ್ಕೆ ಇದೊಂದು ನಿದರ್ಶನ. ಆದರ್ಶವಾಗಿ ಇರಬೇಕಾದ ಜನಪ್ರತಿನಿಧಿಗಳ ಕುಟುಂಬಗಳೇ ಇಂತಹ ಕೃತ್ಯ ನಡೆಸಿರುವುದು ವಿಷಾದನೀಯ. ಈ ಬಗ್ಗೆ ‘ಸಂಬಂಧಿಸಿದ ಪ್ರಾಧಿಕಾರದ ಎದುರು ಯಾರಾದರೂ ದೂರು ನೀಡಲಿ. ತಪ್ಪು ಮಾಡಿದ್ದರೆ ಕ್ರಮ ಆಗುತ್ತದೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈಗ ಈ ಎರಡೂ ಅಗತ್ಯವಾಗಿ ಆಗಬೇಕಾಗಿದೆ.

ದೊಡ್ಡವರೇ ಹೀಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವಾಗ, ಬಡವರು ತಮ್ಮ ಜೀವನ ನಿರ್ವಹಣೆಗಾಗಿ, ಹೊಟ್ಟೆಪಾಡಿಗಾಗಿ, ಸರ್ಕಾರದ ಸೌಲಭ್ಯಕ್ಕಾಗಿ ಈ ರೀತಿ ಪಡೆದರೆ ತಪ್ಪೇನಿಲ್ಲ ಎಂಬ ಅಭಿಪ್ರಾಯ ಜನಸಾಮಾನ್ಯರಲ್ಲಿ ಮೂಡಲು ಇಂತಹ ನಿದರ್ಶನಗಳು ಕಾರಣವಾಗುತ್ತವೆ.

–ಮಲ್ಲತ್ತಹಳ್ಳಿ ಡಾ. ಎಚ್. ತುಕಾರಾಂ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT