ADVERTISEMENT

ವಾಚಕರ ವಾಣಿ: ಜನಪ್ರತಿನಿಧಿಗಳಿಗೆ ಹೊಳೆಯಲಿಲ್ಲವೇಕೆ?

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 19:30 IST
Last Updated 10 ನವೆಂಬರ್ 2020, 19:30 IST

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ರಾಜ್ಯ ಸರ್ಕಾರ ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಮಾರನೇ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ಫೋಟೊ ನೋಡಿದ ನನಗೆ ಬೇಜಾರಾಯಿತು. ಪ್ರಶಸ್ತಿ ಪಡೆದಿದ್ದವರೆಲ್ಲಾ ವಯಸ್ಸಿನಲ್ಲಿ ದೊಡ್ಡವರಾಗಿದ್ದರು. ಅವರನ್ನು ನಿಲ್ಲಿಸಿ, ಸರ್ಕಾರವನ್ನು ಪ್ರತಿನಿಧಿಸುವವರು ಮುಂದಿನ ಸಾಲಿನಲ್ಲಿ ಕುಳಿತುಕೊಂಡಿದ್ದರು. ಇದು ಎಷ್ಟು ಸರಿ?

ನಮ್ಮ ಮನೆಗಳಲ್ಲಿ ಗ್ರೂಪ್‌ ಫೋಟೊ ತೆಗೆಸಿಕೊಳ್ಳುವಾಗ ಹಿರಿಯರನ್ನು ಕೂರಿಸಿ ಚಿಕ್ಕವರಾದ ನಾವು ಅವರ ಹಿಂದೆ ನಿಲ್ಲುತ್ತೇವೆ. ಮುಖ್ಯಮಂತ್ರಿಗಳು ಹಿರಿಯರು, ಪರವಾಗಿಲ್ಲ. ಉಳಿದ ಜನಪ್ರತಿನಿಧಿಗಳಿಗೆ ಇದು ಏಕೆ ಹೊಳೆಯಲಿಲ್ಲ? ಹಿರಿಯರಿಗೆ ಗೌರವ ಕೊಡುವುದು ಹೀಗೇ ಏನು?

–ಅನ್ವಯ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.