ADVERTISEMENT

ಕುವೆಂಪು ಸಾಹಿತ್ಯ: ಪ್ರತಿಷ್ಠಾನಕ್ಕಿಲ್ಲ ಹಕ್ಕುಸ್ವಾಮ್ಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 19:30 IST
Last Updated 13 ಜುಲೈ 2022, 19:30 IST

‘ಕುವೆಂಪು ಸಮಗ್ರ ಬರಹ: ಕೈಗೆಟುಕುವಂತಿರಲಿ’ ಎಂಬ ಪತ್ರಕ್ಕೆ (ವಾ.ವಾ., ಜುಲೈ 11) ಪ್ರತಿಕ್ರಿಯೆ. ಕುವೆಂಪು ಪ್ರತಿಷ್ಠಾನವು 10 ವರ್ಷಗಳಿಂದ ಕುವೆಂಪು ಸಮಗ್ರ ಸಾಹಿತ್ಯದ ಹತ್ತು ಸಾವಿರ ಪುಟಗಳ 11 ಸಂಪುಟಗಳನ್ನು ಮಾರಾಟ ಮಾಡುತ್ತಿದೆ. 2013ರ ಮೊದಲನೇ ಮುದ್ರಣದಲ್ಲಿ ₹ 4,400 ಮುಖಬೆಲೆ ನಿಗದಿಪಡಿಸಿ, ಕವಿಮನೆ ಕುಪ್ಪಳಿಯಲ್ಲಿ ₹ 3,500ಕ್ಕೆ ಮಾರಾಟ ಮಾಡಲಾಗಿದೆ. 2017ರ ಎರಡನೇ ಮುದ್ರಣವನ್ನು ₹ 5,800 ಮುಖಬೆಲೆಗೆ ಮುದ್ರಿಸಿ ಕವಿಮನೆಯಲ್ಲಿ ₹ 4,000ಕ್ಕೆ, ಲಾಭಾಂಶವೇ ಇಲ್ಲದೆ ಮಾರಾಟ ಮಾಡುತ್ತಿದ್ದೇವೆ. ಕೆಲವೇ ಪ್ರತಿಗಳು ಉಳಿದಿದ್ದು, ಕೊರಿಯರ್ ವೆಚ್ಚ ಸೇರಿಸಿ ಪಾವತಿಸಿದರೆ, ಈಗಲೂ ಮನೆಮನೆಗೆ ತಲುಪಿಸುವ ವ್ಯವಸ್ಥೆ ಇದೆ.

ಕುವೆಂಪು ಪ್ರತಿಷ್ಠಾನಕ್ಕೆ ಕುವೆಂಪು ಸಾಹಿತ್ಯದ ಹಕ್ಕುಸ್ವಾಮ್ಯ ಇರುವುದಿಲ್ಲ. ಕಡಿಮೆ ಬೆಲೆಗೆ ಕೊಡಬೇಕು ಎನ್ನುವ ಉದ್ದೇಶವನ್ನು ನಾವು ಗೌರವಿಸುತ್ತೇವೆ. ಸರ್ಕಾರ ಅದೇ ಉದ್ದೇಶಕ್ಕೆ ನೆರವು ನೀಡಿದರೆ ಅತ್ಯಂತ ಕಡಿಮೆ ಬೆಲೆಗೆ ಮುದ್ರಿಸಿ ಕೊಡಲು ಸಿದ್ಧರಿದ್ದೇವೆ. ಪತ್ರದಲ್ಲಿ ಹೇಳಿರುವಂತೆ, ಕುವೆಂಪು ಸಮಗ್ರ ಸಾಹಿತ್ಯ ಖರೀದಿಸಲು ₹ 12,000 ಬೇಕು ಎನ್ನುವುದು ಬೇರೆ ಪ್ರಕಾಶಕರ ಮುದ್ರಣ ಇರಬಹುದು.

⇒ಕಡಿದಾಳ್ ಪ್ರಕಾಶ್,ಸಮಕಾರ್ಯದರ್ಶಿ, ಕುವೆಂಪು ಪ್ರತಿಷ್ಠಾನ, ಕುಪ್ಪಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.