ADVERTISEMENT

ವಾಚಕರ ವಾಣಿ| ಅನುಮತಿ ನೀಡಿದ್ದು ಯಾರು?

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 19:27 IST
Last Updated 30 ಡಿಸೆಂಬರ್ 2021, 19:27 IST

ಇತ್ತೀಚೆಗೆ ಮನೆದೇವರ ದರ್ಶನಕ್ಕೆಂದು ಬೆಂಗಳೂರಿನಿಂದ ಚಿಂತಾಮಣಿ ಕಡೆಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದೆ. ಹೊಸಕೋಟೆ ಬಳಿ ಟೋಲ್ ಪಾವತಿಸಿ ಎಡಕ್ಕೆ ತಿರುಗಿ ಮುಂದೆ ಸಾಗುತ್ತಿದ್ದಂತೆ, ತೀರಾ ಸಾಧಾರಣವಾದ, ಅಲ್ಲಲ್ಲಿ ಹಳ್ಳಬಿದ್ದ ರಸ್ತೆಯಲ್ಲೇ ಪ್ರಯಾಣ ಮುಂದುವರಿಸಬೇಕಾಯಿತು. ಎಚ್.ಕ್ರಾಸ್ ಎಂಬ ಊರು ದಾಟಿದ ನಂತರ ಧುತ್ತನೆ ಎದುರಾಯಿತು ಟೋಲ್‌ಗೇಟ್!

ಅಲ್ಲಿದ್ದ ಸಿಬ್ಬಂದಿ ಟೋಲ್ ಹಣ ನೀಡಿ ಎಂದರು. ಕನಿಷ್ಠಮಟ್ಟದ ಡಾಂಬರೂ ಕಣದ ರಸ್ತೆಗೆ ಟೋಲ್ ಪಾವತಿಸಬೇಕೇ ಎಂದು ಪ್ರಶ್ನಿಸಿದ ನನಗೆ, ಕೆಲ ದಿನಗಳಲ್ಲಿ ಟಾರು ಹಾಕುತ್ತೇವೆ ಎಂಬ ಉತ್ತರ ಸಿಕ್ಕಿತು. ಅವರನ್ನು ಎದುರಿಸಲಾಗದೆ ಹಣ ಪಾವತಿಸಿದೆ. ಅಲ್ಲಿ ಫಾಸ್ಟ್‌ಟ್ಯಾಗ್ ಕೂಡ ಇರಲಿಲ್ಲ. ಅಭಿವೃದ್ಧಿಪಡಿಸಿದ ರಸ್ತೆಯಲ್ಲಿ ಸಂಚರಿಸಲು ಟೋಲ್ ಪಾವತಿ ಸರಿ, ಆದರೆ ಇಂತಹ ರಸ್ತೆಯಲ್ಲಿ ಟೋಲ್‌ಗೆ ಅನುಮತಿ ನೀಡಿದ್ದು ಸರಿಯೇ? ಮತ್ತು ಯಾರು? ಇದು ಅಧಿಕೃತವೋ ಅನಧಿಕೃತವೋ?

- ಪತ್ತಂಗಿ ಎಸ್. ಮುರಳಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.