ADVERTISEMENT

ವಾಚಕರ ವಾಣಿ| ಮತ್ತೊಮ್ಮೆ ಮೂಗಿಗೆ ತುಪ್ಪ?!

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 21:18 IST
Last Updated 26 ಜನವರಿ 2023, 21:18 IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರುವರಿಯಲ್ಲಿ ತಮ್ಮ ಎರಡನೇ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ. ಹಿಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ರೈತ ಶಕ್ತಿ, ಅಸ್ಮಿತೆಯಂತಹ ಯೋಜನೆಗಳು ಜಾರಿಯಾಗಲೇ ಇಲ್ಲ. ಪತ್ರಿಕೆಗಳಲ್ಲಿ ವರದಿಯಾಗಿರುವಂತೆ, ನೂರಕ್ಕೂ ಹೆಚ್ಚು ಯೋಜನೆಗಳು ಅನುಷ್ಠಾನಗೊಂಡಿಲ್ಲ. ಮತ್ತೊಮ್ಮೆ ಜನರ ಮೂಗಿಗೆ ತುಪ್ಪ ಸವರುವ ರೀತಿಯಲ್ಲಿ ಚುನಾವಣಾ ಪ್ರಚಾರದ ಘೋಷಣೆಗಳು ಬರುವುದು ಗ್ಯಾರಂಟಿ.

ಈಡೇರಿಸಲಾಗದಿದ್ದರೆ ಅಂಥ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸುವುದಾದರೂ ಏಕೆ? ಮತ್ತೆ ಹೊಸ ಯೋಜನೆಗಳನ್ನು ಘೋಷಿಸುವಾಗ, ಈಡೇರದ ಯೋಜನೆಗಳ ನೆನಪು ಬಂದು ಮುಜುಗರವಾಗುವುದಿಲ್ಲವೇ? ಆತ್ಮಸಾಕ್ಷಿಗೆ ಪೆಟ್ಟು ಬೀಳುವುದಿಲ್ಲವೇ? ಕರ್ನಾಟಕದ ಜನರು ಏನಾದರೂ ಸಹಿಸಿಕೊಳ್ಳುತ್ತಾರೆ ಎಂಬ ಉದಾಸೀನವೇ?

- ಮಲ್ಲತ್ತಹಳ್ಳಿ ಡಾ. ಎಚ್. ತುಕಾರಾಂ, ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.