ADVERTISEMENT

ವಾಚಕರ ವಾಣಿ| ಪರಿಹಾರ ಕಾರ್ಯ ವಿಳಂಬ ಸಲ್ಲ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 4 ಸೆಪ್ಟೆಂಬರ್ 2022, 19:31 IST
Last Updated 4 ಸೆಪ್ಟೆಂಬರ್ 2022, 19:31 IST

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯು ಗೌರಿ ಗಣೇಶ ಹಬ್ಬದ ಸಂಭ್ರಮವನ್ನೇ ಕಸಿದುಕೊಂಡಿದೆ. ಮಳೆಯಿಂದ ಆಗಿರುವ ಹಾನಿಯ ಕುರಿತು ಸರ್ಕಾರ ಲೆಕ್ಕ ಕೊಟ್ಟಿದೆಯಾದರೂ ಲೆಕ್ಕಕ್ಕೆ ಸಿಗದಿರುವ ಸಾವು-ನೋವು ಮತ್ತು ನಷ್ಟದ ಪ್ರಮಾಣ ಹಲವು ಪಟ್ಟು ಹೆಚ್ಚಾಗಿರುವ ಸಾಧ್ಯತೆ ಇದೆ. ಸರ್ಕಾರದ ಅಂದಾಜಿನಂತೆ, 2019ರಿಂದ 2021ರವರೆಗೆ ಮಳೆಯಿಂದ ಆಗಿರುವ ಒಟ್ಟಾರೆ ನಷ್ಟ ₹ 2 ಲಕ್ಷ ಕೋಟಿ. ಆದರೂ ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಿರುವ ಪರಿಹಾರದ ಹಣ ಸುಮಾರು ₹ 4,200 ಕೋಟಿ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಕಷ್ಟಕ್ಕೆ ಹೆಗಲು ಕೊಟ್ಟು ಆಸರೆಯಾಗಬೇಕಾದ ಕೇಂದ್ರ ಸರ್ಕಾರವು ಇದರಿಂದ ನುಣುಚಿಕೊಳ್ಳುತ್ತಲೇ ಇದೆ. ಅದು ಹಾಗೆ ಮಾಡಬಾರದು.

ಕೇಂದ್ರವು ಕೂಡಲೇ ಅಧ್ಯಯನ ತಂಡವೊಂದನ್ನು ರಚಿಸಿ, ಅದರಿಂದ ತುರ್ತು ವರದಿ ತರಿಸಿಕೊಂಡು ಪರಿಹಾರ ಘೋಷಣೆ ಮಾಡಬೇಕು. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು, ರಾಜ್ಯಕ್ಕೆ ಪರಿಹಾರದ ಹಣ ತಂದುಕೊಡಲು ಶ್ರಮಿಸಬೇಕು. ರಾಜ್ಯ ಸರ್ಕಾರವು ಅಲ್ಲಿಯವರೆಗೆ ಕಾಯದೆ ಪರಿಹಾರ ಕಾರ್ಯಗಳಿಗೆ ಚುರುಕು ಮುಟ್ಟಿಸಬೇಕು. ಸಂತ್ರಸ್ತರಿಗೆ ಆಸರೆಯಾಗಿ ನಿಲ್ಲಬೇಕು.

- ಬೇ.ನ.ಶ್ರೀನಿವಾಸಮೂರ್ತಿ,ತುಮಕೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.