ADVERTISEMENT

ವಾಚಕರ ವಾಣಿ| ರಾಜಕಾರಣಿಗಳಿಗೆ ಬೇಕು ಶುದ್ಧೀಕರಣ!

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 21:19 IST
Last Updated 26 ಜನವರಿ 2023, 21:19 IST

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಭ್ರಷ್ಟಾಚಾರದ ಕೂಪವಾದ ವಿಧಾನಸೌಧವನ್ನು ಗಂಜಲದಿಂದ ಶುದ್ಧೀಕರಣ ಮಾಡುವುದಾಗಿ ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾತಿಗೆ ಪ್ರತಿಕ್ರಿಯಿಸಿರುವ ಸಚಿವ ಡಾ. ಅಶ್ವತ್ಥನಾರಾಯಣ, ‘ಭ್ರಷ್ಟಾಚಾರದ ಸಾಕಾರರೂಪವಾಗಿರುವ ಅವರೇ ಪ್ರತಿದಿನ ಗಂಗಾಜಲ, ಗೋಮೂತ್ರ ಬಳಸಿ ಸ್ನಾನ ಮಾಡಿ ಶುದ್ಧಿಯಾಗಲಿ’ ಎಂದಿದ್ದಾರೆ (ಪ್ರ.ವಾ., ಜ. 26). ಇವರಿಬ್ಬರ ಕ್ರಿಯೆ ಮತ್ತು ಪ್ರತಿಕ್ರಿಯೆಯನ್ನು ಗಮನಿಸಿದರೆ, ಭ್ರಷ್ಟಾಚಾರದ ಕೂಪವೆನಿಸಿರುವ ವಿಧಾನಸೌಧಕ್ಕೂ ಅದರಲ್ಲಿ ರಾರಾಜಿಸುವ ರಾಜಕಾರಣಿಗಳಿಗೂ ಗೋಮೂತ್ರ ಸ್ನಾನದ ಅಗತ್ಯ ಇದ್ದಂತೆ ಕಾಣುತ್ತದೆ. ಆದ್ದರಿಂದ, ಕರ್ನಾಟಕದ ನಾಲ್ಕೂ ದಿಕ್ಕುಗಳಿಂದ ವಿಧಾನಸೌಧದ ಒಳಕ್ಕೆ ಗೋವುಗಳನ್ನು ತುಂಬಿಸಿ, ಭ್ರಷ್ಟಾಚಾರದ ಆಗರವಾಗಿರುವ ಸೌಧವನ್ನೂ ಜೊತೆಗೆ ರಾಜಕಾರಣಿಗಳನ್ನೂ ಗಂಜಲದಿಂದ ಶುದ್ಧೀಕರಣ ಮಾಡುವ ಕೆಲಸವನ್ನು ಮತದಾರರು ಮಾಡುವಂತಾಗಲಿ.

- ತಾ.ಸಿ.ತಿಮ್ಮಯ್ಯ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT