ADVERTISEMENT

ಇಂಥ ವ್ಯರ್ಥ ಪ್ರಲಾಪ ಯಾಕೆ?

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 20:00 IST
Last Updated 12 ನವೆಂಬರ್ 2018, 20:00 IST

‘ಕನ್ನಡ ಭಾಷಿಕ ಜನರಿಗೆ ಭಾಷಾ ನಿರಭಿಮಾನ, ಆತ್ಮವಿಶ್ವಾಸದ ಕೊರತೆ ಕಾಡುತ್ತಿದೆ’ (ಪ್ರ.ವಾ., ನ. 05) ಎಂದು ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರು ಹೇಳಿರುವುದು ವರದಿಯಾಗಿದೆ.

ಸಾಮಾನ್ಯ ಜನರಿಗೆ ಬದುಕು ಬಹಳ ಮುಖ್ಯವಾಗಿರುತ್ತದೆ. ಅವರು ಬದುಕಿಗೆ ಹತ್ತಿರ (ಅನ್ನದ ಭಾಷೆ ) ಎಂದು ಇಂಗ್ಲಿಷ್ ಎಂಬ ಮಾಯಾಂಗನೆಯ ಬೆನ್ನುಬಿದ್ದಿದ್ದಾರೆ. ಇದಕ್ಕೆ ತುಪ್ಪ ಸುರಿದಂತೆ, ಬ್ಯಾಂಕಿಂಗ್, ಎಸ್ಎಸ್‌ಸಿ (ಸ್ಟಾಫ್ ಸೆಲೆಕ್ಷನ್ ಕಮಿಷನ್) ಮೊದಲಾದ ಕೇಂದ್ರೀಯ ನೇಮಕಾತಿ ಪರೀಕ್ಷೆಗಳನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ನಡೆಸಲಾಗುತ್ತಿದೆ. ಇಂಥ ವಿಷಯಗಳಲ್ಲಿ ಸಾಹಿತಿಗಳ ದನಿ ಇಲ್ಲವೇ ಇಲ್ಲ. ಬದುಕಿಗೆ ಪೂರಕವಾದ ಇಂತಹ ಉಪಕ್ರಮಗಳ ಮೂಲಕ ಕನ್ನಡ ಭಾಷೆಯನ್ನು ಗಟ್ಟಿಗೊಳಿಸಬೇಕಾಗಿದೆ. ಭಾವನಾತ್ಮಕ ನೆಲೆಯಲ್ಲಿ ಮಾತುಗಳನ್ನು ಮುಂದುವರಿಸುತ್ತಾ ಹೋದರೆ ಭಾಷೆ ಕೃಶವಾಗುತ್ತಾ ಹೋಗುತ್ತದೆ. ಅಂತೆಯೇ ವ್ಯರ್ಥ ಪ್ರಲಾಪ ಮುಂದುವರೆಯುತ್ತದೆ ಅಷ್ಟೇ.

-ಗಿರೀಶ್ ಎಂ.ಬಿ., ಹೊಳಲ್ಕೆರೆ, ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.