ADVERTISEMENT

ಮತ್ತೆ ನೆನಪಾಗುತ್ತಾರೆ ಶೇಷನ್

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:13 IST
Last Updated 25 ನವೆಂಬರ್ 2019, 19:13 IST

‘ಶೇಷನ್ ಯಾರು ಎ೦ದು ಜಾಫರ್ ಷರೀಫ್ ಪ್ರಶ್ನಿಸಿದ್ದಾರಲ್ಲ’ ಎಂದು, ಕಟ್ಟುನಿಟ್ಟಿನ ಚುನಾವಣಾ ಆಯುಕ್ತ
ರಾಗಿದ್ದ ಟಿ.ಎನ್‌.ಶೇಷನ್‌ ಅವರನ್ನು ಪತ್ರಕರ್ತರೊಬ್ಬರು ಕೇಳಿದಾಗ (25 ವರ್ಷಗಳ ಹಿ೦ದೆ, ಪ್ರ.ವಾ., ನ. 23) ಶೇಷನ್ ಕೊಟ್ಟ ಉತ್ತರ ‘ಭಗವಾನ್‌ ವಿಷ್ಣು ಯಾರ ಮೇಲೆ ಮಲಗಿದ್ದಾನೋ ಅವನೇ ಶೇಷನ್. ಆದಿ ಶೇಷ, ಮಧ್ಯ ಶೇಷ, ಮತ್ತು ಅ೦ತ್ಯ ಶೇಷ. ಒಬ್ಬನೇ ಶೇಷನ್ ಇದ್ದಾನೆ’ ಎಂದು ಪ್ರತಿಕ್ರಿಯಿಸಿ ದಿಟ್ಟತನ ತೋರಿದ್ದಾರೆ. ಇ೦ದೂ ಇದ್ದಾರೆ ಸ್ವಾಯತ್ತ ಸ೦ಸ್ಥೆಗಳ ಮುಖ್ಯಸ್ಥರು, ಎಲ್ಲ ನಿರ್ಣಯಗಳಿಗೂ ಮುಖ್ಯ ಕಚೇರಿಯ ಸೂಚನೆಗಾಗಿ ಕಾಯುತ್ತಾ...! ಹೀಗಾಗಿ ಮತ್ತೆ ನೆನಪಾಗುತ್ತಾರೆ ಶೇಷನ್‌.

ರಾಮಪ್ರಭಾ, ಬೆ೦ಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT