ADVERTISEMENT

ವಾಚಕರ ವಾಣಿ: ಆತಂಕಕಾರಿ ಹೇಳಿಕೆಗೆ ಬೇಕು ಕಡಿವಾಣ

​ಪ್ರಜಾವಾಣಿ ವಾರ್ತೆ
Published 2 ಮೇ 2021, 19:45 IST
Last Updated 2 ಮೇ 2021, 19:45 IST

ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೊ ನೋಡಿದೆ. ಅದರಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡ ಧ್ವನಿ ಸಂದೇಶ ಹೀಗಿತ್ತು: ಲಾಕ್‌ಡೌನ್ ಇನ್ನೂ ಎರಡು ತಿಂಗಳು ಮುಂದುವರಿಯಲಿದೆ. ಆದ್ದರಿಂದ ಎಲ್ಲರೂ ಎರಡು ತಿಂಗಳಿಗಾಗುವಷ್ಟು ಆಹಾರ ಹಾಗೂ ಅವಶ್ಯಕ ವಸ್ತುಗಳನ್ನು ಶೇಖರಿಸಿಡುವ ಕೆಲಸ ಮಾಡುವುದು ಒಳ್ಳೆಯದು ಎಂಬ ರೀತಿಯಲ್ಲಿ ಅವರು ಐದು ನಿಮಿಷ ಮಾತನಾಡಿದ್ದಾರೆ.

ಈ ಧ್ವನಿಮುದ್ರಣ ಆಲಿಸಿದ ಜನರಲ್ಲಿ ಆತಂಕ ಮೂಡದೇ ಇರದು. ಪರಿಣಾಮ, ದಿನಸಿ ಹಾಗೂ ಅವಶ್ಯಕ ವಸ್ತುಗಳನ್ನು ಕೊಳ್ಳಲು ನೂಕುನುಗ್ಗಲು ಉಂಟಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸಂದೇಶಗಳನ್ನು ಹರಡುವವರಿಗೆ ಕಡಿವಾಣ ಹಾಕಿ ಸೂಕ್ತ ಕ್ರಮ ಕೈಗೊಳ್ಳಬೇಕು.

ಮಂಜುನಾಥ್ ಜೈನ್ ಎಂ.ಪಿ.,ಮಂಡ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.