ADVERTISEMENT

ವಾಚಕರ ವಾಣಿ | ಹೀಗೊಂದು ನಿಯಮ ಜಾರಿಯಾದರೆ...!

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 19:21 IST
Last Updated 16 ನವೆಂಬರ್ 2022, 19:21 IST

ಸರ್ಕಾರ ಹೀಗೊಂದು ನಿಯಮ ಮಾಡಿದರೆ ಹೇಗೆ?! ರಾಜ್ಯದ ಎಲ್ಲಾ ಶಾಲೆಗಳ ಕಟ್ಟಡಗಳನ್ನೂ ಜೀರ್ಣೋದ್ಧಾರ ಮಾಡಿ, ಅವೆಲ್ಲವೂ ಸುಸ್ಥಿತಿಯಲ್ಲಿವೆ ಎಂದು ಖಾತರಿಯಾದ ನಂತರವೇ ಅವುಗಳ ಗೋಡೆಗಳಿಗೆ ತಜ್ಞರು ಸೂಚಿಸಿದ ಬಣ್ಣ ಹಚ್ಚಬೇಕು.

ನಗರದಲ್ಲಿ ಈಗಿರುವ ಎಲ್ಲಾ ರಸ್ತೆಗಳು ಹಾಗೂ ಹಳ್ಳಿ, ತಾಲ್ಲೂಕು, ಜಿಲ್ಲಾ ಮಟ್ಟದ ರಸ್ತೆಗಳು, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಗುಂಡಿಮುಕ್ತವಾದ ಬಳಿಕವಷ್ಟೇ ಹೊಸ ರಸ್ತೆಗಳ ನಿರ್ಮಾಣಕ್ಕೆ ಕೈ ಹಾಕಬೇಕು. ಈಗಿರುವ ಸರ್ಕಾರಿ ಆಸ್ಪತ್ರೆಗಳು ಜನರು ಚಿಕಿತ್ಸೆ ಪಡೆಯಲು ಯೋಗ್ಯ ಎಂದು ಖಾತರಿಯಾದ ನಂತರವೇ ಹೊಸ ಆಸ್ಪತ್ರೆ ನಿರ್ಮಾಣ ಮಾಡಬೇಕು.

ಪ್ರಸ್ತುತ ಇರುವ ಮಹನೀಯರ ಪ್ರತಿಮೆಗಳು ನಿರ್ಮಾಣವಾಗಿದ್ದರಿಂದಲೇ ಅಂಥವರ ಆದರ್ಶಗಳನ್ನು ಅಲ್ಪಸ್ವಲ್ಪವಾದರೂ ಅಳವಡಿಸಿಕೊಳ್ಳಲು ಸಾಧ್ಯವಾಯಿತು ಎನ್ನುವವರು ಇದ್ದಾರೆಯೇ ಎಂದು ಸಮೀಕ್ಷೆ ನಡೆಸಿ, ಅವಶ್ಯವೆನಿಸಿದರೆ ಮಾತ್ರ ಹೊಸ ಪ್ರತಿಮೆಗಳ ನಿರ್ಮಾಣಕ್ಕೆ ಮುಂದಾಗಬೇಕು. ಇಂಥ ಕೆಲವು ಸಾಮಾಜಿಕ ನಡವಳಿಕೆಗಳನ್ನು ಜಾರಿಗೆ ತಂದರೆ ಒಳ್ಳೆಯದಾಗಬಹುದು.
–ಡಾ. ಜಿ.ಬೈರೇಗೌಡ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.