ADVERTISEMENT

ವಾಚಕರ ವಾಣಿ: ಹೈನುಗಾರಿಕೆಗೆ ಕೊಡಲಿ ಪೆಟ್ಟು ಬೀಳದಿರಲಿ

​ಪ್ರಜಾವಾಣಿ ವಾರ್ತೆ
Published 28 ಮೇ 2021, 17:24 IST
Last Updated 28 ಮೇ 2021, 17:24 IST

ರೈತರಿಂದ ಹಾಲು ಖರೀದಿಯನ್ನು ವಾರಕ್ಕೆ ಎರಡು ದಿನ ಸ್ಥಗಿತಗೊಳಿಸಲು ಕೆಎಂಎಫ್‌ ಚಿಂತನೆ ನಡೆಸಿರುವುದನ್ನು ತಿಳಿದು ದುಃಖವಾಯಿತು. ಲಾಕ್‌ಡೌನ್‌ನಿಂದಾಗಿ ಮೊದಲೇ ಕೆಲಸವಿಲ್ಲದೆ ಜನರು ಪರಿತಪಿಸುತ್ತಿರುವಾಗ, ಇರುವ ಕೆಲವೇ ಉದ್ಯೋಗಾವಕಾಶಗಳಲ್ಲಿ ಒಂದಾದ ಹೈನುಗಾರಿಕೆಗೆ ಕೊಡಲಿ ಏಟು ಹಾಕುವುದು ಸರಿಯಲ್ಲ.

ಸ್ವತಃ ಕೆಎಂಎಫ್‌ ಸೂಚಿಸಿರುವಂತೆ, ಸರ್ಕಾರ ತನ್ನ ಕ್ಷೀರಭಾಗ್ಯ, ಬಿಸಿಯೂಟದಂತಹ ಯೋಜನೆಗಳಿಗೆ ಮೀಸಲಿಟ್ಟ ಹಣದಿಂದ ಹಾಲಿನ ಪುಡಿಯನ್ನು ಖರೀದಿಸಿ ಎಲ್ಲಾ ಮಕ್ಕಳಿಗೆ ಹಾಗೂ ಪಡೆಯಲಿಚ್ಛಿಸುವ ಕುಟುಂಬಗಳಿಗೆ ಉಚಿತವಾಗಿ ಹಂಚಲು ಮುಂದಾಗಬೇಕು. ಇದರಿಂದ ರೈತರಿಗೂ ಅನುಕೂಲ, ಹಾಲು ಕೂಡ ಸದ್ಬಳಕೆಯಾಗುವುದು. ಅದೂ ಅಲ್ಲದೆ ಕೊರೊನಾ ಮೂರನೇ ಅಲೆಯ ಹೊಡೆತವನ್ನು ಎದುರಿಸಲು ಮುಖ್ಯವಾಗಿ ಮಕ್ಕಳಿಗೆ ಶಕ್ತಿ ಬರುವುದು.

-ಸತೀಶ ಎಂ.ಎಸ್. ಭಟ್ಟ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.