ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಏರಿಳಿತಕ್ಕೆ ಸಂಬಂಧವೇ ಇಲ್ಲದ ರೀತಿಯಲ್ಲಿ ನಮ್ಮಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ನಿರಂತರವಾಗಿ ಏರುತ್ತಲೇ ಇರುವುದು ಖಂಡನೀಯ. ಜೊತೆಗೆ ವಿವಿಧ ಬಗೆಯ ಉಪಕರಗಳ ಹೊರೆ ಬೇರೆ. ಕೋವಿಡ್ ಸಂಕಷ್ಟದ ಈ ಕಾಲದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ವರಮಾನದ ಬಗ್ಗೆಯೇ ಲೆಕ್ಕಾಚಾರ ಹಾಕುತ್ತಿರುವುದು ದುರದೃಷ್ಟವೇ ಸರಿ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಇಳಿಸಿ, ನಾಗರಿಕರ ಮೇಲೆ ಬೀಳುವ ಹೊರೆಯನ್ನು ತಗ್ಗಿಸಬೇಕಾಗಿದೆ.
- ವಿಜಯಕುಮಾರ್ ಎಚ್.ಕೆ., ರಾಯಚೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.