ADVERTISEMENT

ವಾಚಕರವಾಣಿ: ರೂಪಾಂತರಿ ವೈರಸ್‌, ಬೇಕು ಎಚ್ಚರ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 19:30 IST
Last Updated 10 ನವೆಂಬರ್ 2021, 19:30 IST

ದೇಶದಲ್ಲಿ ಕೊರೊನಾ ಸೋಂಕಿಗೆ ರಾಮಬಾಣ ಎನಿಸಿರುವ ಲಸಿಕೆಯನ್ನು ನೂರು ಕೋಟಿ ಡೋಸ್ ವಿತರಿಸಿದ ಉತ್ಸಾಹದಲ್ಲಿರುವ ಸರ್ಕಾರಗಳಿಗೆ ಇದೀಗ ರೂಪಾಂತರಿ ಕೊರೊನಾದ ಆತಂಕ ಶುರುವಾಗಿದೆ. ರೂಪಾಂತರಿ ವೈರಸ್‍ ಐರೋಪ್ಯ ರಾಷ್ಟ್ರಗಳಲ್ಲಿ ಆತಂಕವನ್ನು ಸೃಷ್ಟಿಸುತ್ತಿರುವುದರಿಂದ ಇವುಗಳಲ್ಲಿ ಹಲವು ರಾಷ್ಟ್ರಗಳು ಪುನಃ ಲಾಕ್‍ಡೌನ್ ಮೊರೆ ಹೋಗಿವೆ. ಭಾರತದಲ್ಲಿಯೂ ಡೆಲ್ಟಾದ ರೂಪಾಂತರಿ ವೈರಸ್ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಈಗಷ್ಟೇ ಸಹಜ ಸ್ಥಿತಿಗೆ ಬರುತ್ತಿರುವ ಜನಜೀವನ ಮತ್ತೆ ಸಂಕಷ್ಟಕ್ಕೆ ಈಡಾಗುವುದು ಬೇಡ ಎನ್ನುವುದಾದರೆ ಎಚ್ಚರ ಅಗತ್ಯ. ಲಸಿಕೆ ಪಡೆದಿದ್ದರೂ ರೂಪಾಂತರಿ ಕೊರೊನಾ ವೈರಸ್ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಲಸಿಕೆ ಪಡೆದ ಮಾತ್ರಕ್ಕೆ ಕೋವಿಡ್‌ ವಿರುದ್ಧ ಪರಿಪೂರ್ಣ ಗೆದ್ದಂತೆ ಎಂದು ಭಾವಿಸಬೇಕಿಲ್ಲ. ಜೀವನ ಹಾಗೂ ಜೀವದ ನಡುವಣ ಈ ಹೋರಾಟವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಎಚ್ಚರಿಕೆಯಿಂದ ಇರಬೇಕು.

ಕೊರೊನಾ ಸೋಂಕು ಹೆಚ್ಚಾದಾಗ ಪ್ರತಿಸಲ ಲಾಕ್‍ಡೌನ್ ಹೇರಲಾಗದು. ಎಲ್ಲರನ್ನೂ ತಿಂಗಳುಗಟ್ಟಲೆ ಮನೆಯಲ್ಲಿಯೇ ಇರುವಂತೆ ನಿರ್ಬಂಧ ವಿಧಿಸುವುದಕ್ಕೆ ಸಾಧ್ಯವಿಲ್ಲ. ಜನರು ಜವಾಬ್ದಾರಿ ಅರಿತು ನೆರೆಹೊರೆಯಲ್ಲಿ ಜಾಗೃತಿ ಮೂಡಿಸಬೇಕು. ಸೋಂಕು ಕ್ಷೀಣಿಸುತ್ತಿದ್ದಂತೆ ಮಾಸ್ಕ್ ಧರಿಸದೇ ಇರುವುದು, ಅಂತರ ಕಾಯ್ದುಕೊಳ್ಳದೇ ಇರುವುದು ಸರಿಯಲ್ಲ. ಕೊರೊನಾ ವೈರಸ್‌ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ ಎನ್ನುವುದನ್ನು ಮರೆಯ ಬಾರದು. ಈ ಎಲ್ಲಕ್ಕಿಂತ ಮುಖ್ಯವಾಗಿ, ಸರ್ಕಾರವೇ ಎಲ್ಲವನ್ನೂ ಮಾಡಬೇಕು ಎನ್ನುವ ಮನಃಸ್ಥಿತಿಯಿಂದ ಹೊರ ಬಂದು, ‘ನಮ್ಮ ಆರೋಗ್ಯ ನಮ್ಮ ಕೈಯಲ್ಲಿ’ ಎನ್ನುವುದನ್ನು ಅರಿಯಬೇಕು.

- ಬೇ.ನ.ಶ್ರೀನಿವಾಸಮೂರ್ತಿ,ತುಮಕೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.