ADVERTISEMENT

ಇಂದಿರಾ ಕ್ಯಾಂಟೀನ್ ಸೊರಗಿಸುತ್ತಿರುವುದೇಕೆ?

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 20:41 IST
Last Updated 28 ಸೆಪ್ಟೆಂಬರ್ 2022, 20:41 IST

‘ಇಂದಿರಾ ಕ್ಯಾಂಟೀನ್’ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಸೊರಗುತ್ತಿದೆ. ಲಕ್ಷಾಂತರ ಮಂದಿಯ ಹಸಿವು ತಣಿಸುತ್ತಿದ್ದ ಕ್ಯಾಂಟೀನ್ ಈಗ ಒಡಲು ಬರಿದಾಗಿಸಿಕೊಂಡು ನಿಂತಿದೆ. ಇದಕ್ಕೆ ಸರ್ಕಾರ ಸರಿಯಾಗಿ ಹಣ ಬಿಡುಗಡೆ ಮಾಡದಿರುವುದು, ತಮ್ಮ ಪಕ್ಷದ ಯೋಜನೆ ಅಲ್ಲ ಎಂಬ ತಾತ್ಸಾರ ಮನೋಭಾವ, ಜವಾಬ್ದಾರಿ ವಹಿಸಿಕೊಂಡವರಿಂದ ನಿರ್ವಹಣೆ ಲೋಪ ಮುಖ್ಯ ಕಾರಣಗಳಾಗಿವೆ.

ವಯೋವೃದ್ಧರು, ನಿರ್ಗತಿಕರು, ಕೂಲಿಕಾರ್ಮಿಕರು, ಸಣ್ಣ ವ್ಯಾಪಾರಸ್ಥರು,ಆಟೊ ಚಾಲಕರು, ವಿದ್ಯಾರ್ಥಿ
ಗಳಂಥವರ ಹಸಿವನ್ನು ಇಂದಿರಾ ಕ್ಯಾಂಟೀನ್‌ ನೀಗಿಸುತ್ತಿದೆ. ಇಂತಹ ಜನಪರ ಯೋಜನೆಯನ್ನು ರಾಜಕೀಯದ ಕಾರಣಕ್ಕೆ ನಿರ್ಲಕ್ಷಿಸುತ್ತಿರುವುದು ಎಷ್ಟು ಸರಿ? ಕಳಪೆ ಮಟ್ಟದ ಊಟ-ತಿಂಡಿ ನೀಡಿ, ಜನ ಬರುವುದಿಲ್ಲ ಎಂಬ ನೆಪವೊಡ್ಡಿ ಕ್ಯಾಂಟೀನ್ ಮುಚ್ಚುವ ಹುನ್ನಾರವೇ?

ನಬಿಸಾಬ ಆರ್.ಬಿ. ದೋಟಿಹಾಳ,ಕುಷ್ಟಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.