ADVERTISEMENT

ವಾಚಕರ ವಾಣಿ: ರಾಜ್ಯೋತ್ಸವ ಪ್ರಶಸ್ತಿ: ವಿವರ ಪ್ರಕಟಿಸಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 22:00 IST
Last Updated 4 ನವೆಂಬರ್ 2021, 22:00 IST

‘ರಾಜ್ಯೋತ್ಸವ ಪ್ರಶಸ್ತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ಹೀಗಾಗಿ, ಪ್ರಶಸ್ತಿ ಕೊಡಿ ಎಂದು ಇನ್ನು ಮುಂದೆ ಯಾರೂ ಸ್ವವಿವರ ಸಹಿತ ಅರ್ಜಿ ಸಲ್ಲಿಸಬೇಕಿಲ್ಲ. ಆಯ್ಕೆ ಸಮಿತಿ ತಾನೇ ಶೋಧಿಸಿ, ಗುರುತಿಸಿದಾಗ ಪ್ರಶಸ್ತಿಯ ಮೌಲ್ಯ ಹೆಚ್ಚುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜೊತೆಗೆ ಪ್ರಶಸ್ತಿಗೆ ಕನಿಷ್ಠ 60 ವರ್ಷ ಆಗಿರಬೇಕೆಂಬ ನಿರ್ಬಂಧ ಸಡಿಲಿಸಲು ಪ್ರಯತ್ನಿಸುವುದಾಗಿ ಕೂಡಾ ಹೇಳಿದ್ದಾರೆ.

ಈ ಮಾತುಗಳನ್ನು ಆಲಿಸಿದ ಸ್ವಾಭಿಮಾನಿ ಸಾಧಕರಿಗೆ ಅತ್ಯಂತ ಸಂತೋಷ ಆಗಿರುವುದರಲ್ಲಿ ಸಂದೇಹವಿಲ್ಲ. ಅರ್ಜಿ ಸಲ್ಲಿಕೆ, ವಶೀಲಿಬಾಜಿ ಮುಂತಾದವುಗಳಿಗೆ ಒಗ್ಗದ ಸಜ್ಜನ ಸ್ವಾಭಿಮಾನಿ ಸಾಧಕರು ಇನ್ನೂ ಮರೆಯಲ್ಲೇ ಇದ್ದಾರೆ. ಸರ್ಕಾರದ ಈ ನಡೆ ಸ್ವಾಗತಾರ್ಹ. ಆಯ್ಕೆ ಪಾರದರ್ಶಕವಾಗಿದ್ದರೆ ಮಾತ್ರ ಇದು ಸೂಕ್ತ. ಪ್ರಶಸ್ತಿ ಪುರಸ್ಕೃತರ ಸಾಧನೆಗಳನ್ನೂ, ಅವರನ್ನು ಹೇಗೆ ಮತ್ತು ಯಾವ ಕಾರಣಕ್ಕಾಗಿ ಗುರುತಿಸಲಾಯಿತು ಎಂಬ ಎಲ್ಲ ವಿವರಗಳನ್ನೂ ಇಲಾಖೆಯ ವೆಬ್‌ಸೈಟಿನಲ್ಲಿ ಪ್ರಕಟಿಸಿದರೆ ಪಾರದರ್ಶಕತೆ ಸಾಧ್ಯ. ಇಲ್ಲವಾದಲ್ಲಿ ವಶೀಲಿ ಮತ್ತು ಒತ್ತಡ ಹಾಕುವವರಿಗೆ ಪ್ರಶಸ್ತಿ ದಕ್ಕುವ ಸಾಧ್ಯತೆ ಇದೆ.

ಪತ್ತಂಗಿ ಎಸ್. ಮುರಳಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.