ADVERTISEMENT

ವಾಚಕರ ವಾಣಿ: ಪ್ರಾಧ್ಯಾಪಕರ ಆಯ್ಕೆ ಪಾರದರ್ಶಕವಾಗಿರಲಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 21:45 IST
Last Updated 1 ಮಾರ್ಚ್ 2022, 21:45 IST

ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದಾಗಿದೆ. ವಿವಿಧ ಇಲಾಖೆಗಳ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಮಾನದಂಡದ ಬಗ್ಗೆ ಈಗ ನ್ಯಾಯಾಲಯದಲ್ಲಿರುವ ಪ್ರಕರಣಗಳು ಪರೀಕ್ಷಾ ಪಾರದರ್ಶಕತೆ ಕುರಿತು ಅನೇಕ ಸಂಶಯಗಳಿಗೆ ಎಡೆಮಾಡಿವೆ.

ಲಕ್ಷಾಂತರ ರೂಪಾಯಿ ಸುರಿದು ವಾಮಮಾರ್ಗದ ಮೂಲಕ ಆಯ್ಕೆಯಾಗಲು ಹುನ್ನಾರ ಮಾಡುತ್ತಿರುವ ನಯವಂಚಕರ ಬಗ್ಗೆ ಪ್ರಾಧಿಕಾರ ಹೆಚ್ಚು ನಿಗಾ ವಹಿಸಿ, ನಿಷ್ಠಾವಂತರಿಗೆ ನ್ಯಾಯ ಒದಗಿಸಬೇಕಾಗಿದೆ. ಯಾವುದೇ ಆಮಿಷ, ಒತ್ತಡಕ್ಕೆ ಮಣಿಯದೆ ಪರೀಕ್ಷೆ ಹಾಗೂ ಮೌಲ್ಯಮಾಪನದಲ್ಲಿ ಅಕ್ರಮಕ್ಕೆ ಆಸ್ಪದವಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ.

ತೂಬಿನಕೆರೆ ಲಿಂಗರಾಜು,ಮಂಡ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.